ಛೇ, ಅಡ್ಡ ದಾರಿ ಹಿಡಿದ ಕನ್ನಡದ ಖ್ಯಾತ ನಟಿ ಸಿಂಧು ಲೋಕನಾಥ್!! ಅಪಾರ ಅಭಿಮಾನಿಗಳಿಗೆ ತಲ್ಲಣ-ನಟಿಯ ಈ ನಡೆ ಏಕೆ!??

ಕನ್ನಡದ ಕೃಷ್ಣಾ ಟಾಕೀಸ್ ಸಿನಿಮಾ ನಂತರ ಚಿತ್ರ ರಂಗದಿಂದ ದೂರ ಉಳಿದಿದ್ದ ನಟಿ ಸಿಂಧು ಲೋಕನಾಥ್ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.ಮೊನ್ನೆಯಷ್ಟೇ ಟಾಕ್ ಶೋ ಒಂದರಲ್ಲಿ ಕಾಣಿಸಿಕೊಂಡು ವೀಕ್ಷಕರನ್ನು ರಂಜಿಸಿದ್ದ ಸಿಂಧು, ಇದೀಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ದಯಾನಂದ್ ಹಾಗೂ ಆನಂದ್ ಎಂಬಿಬ್ಬರು ನಿರ್ದೇಶಕರು ಚಿತ್ರವನ್ನು ನಿರ್ದೇಶಸಿದ್ದು, ಪ್ರಮುಖ ಪಾತ್ರಗಳಲ್ಲಿ ರಾಕೇಶ್ ಅಡಿಗ, ವಿನಯ್ ಗೌಡ ಮುಂತಾದವರು ಕಾಣಿಸಿಕೊಂಡಿದ್ದಾರೆ. ಪದ್ಮವ್ಯೂಹ ಎಂಬ ಚಿತ್ರ ಇದಾಗಿದ್ದು, ನಟಿ ಸಿಂಧು ಓರ್ವ ಕೆಟ್ಟಚಟಗಳಿಗೆ ಬಲಿಯಾದ ಹುಡುಗಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಒಂದು ವಿಭಿನ್ನ ಶೈಲಿಯ ಕಥೆ, ಅಭಿನಯಗಳನ್ನು ಹೊಂದಿರುವ ಚಿತ್ರ ಇದಾಗಿದ್ದು, ಶ್ರೀ ಮಂತ ಹುಡುಗಿಯೊಬ್ಬಳು ತಪ್ಪು ದಾರಿ ತುಳಿದಾಗ ಆಗುವ ಪರಿಣಾಮ ಹಾಗೂ ಅದರಿಂದ ಹೊರಬರಲಾಗದೆ ಪಡುವ ಕಷ್ಟಗಳನ್ನು ಚಿತ್ರೀಸಲಾಗಿದ್ದು, ಹೊಸ ಅನುಭವ ಹಾಗೂ ವಿಶೇಷ ಪಾತ್ರ ಎನ್ನುತ್ತಾರೆ ನಟಿ ಸಿಂಧು.

Leave A Reply