ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಗ್ರೌಂಡ್ ಇಂಚಾರ್ಜ್|ತಲೆಗೆ ಗಂಭೀರ ಗಾಯವಾಗಿ 9 ಸ್ಟಿಚ್ ಹಾಕಿಸಿಕೊಂಡ ವಿದ್ಯಾರ್ಥಿ

ಗ್ರೌಂಡ್ ಇಂಚಾರ್ಜ್ ವಿದ್ಯಾರ್ಥಿ ಮೇಲೆ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ನಡೆದಿದೆ.

ಹಲ್ಲೆಗೊಳಗಾದ ಬಿಬಿಎ ವಿದ್ಯಾರ್ಥಿ ಸಂತೋಷ್ ಹತ್ತೂರ ಎಂದು ತಿಳಿದು ಬಂದಿದೆ.

ಯಲ್ಲಪ್ಪ ಚಲವಾದಿ ಎಂಬ ಗ್ರೌಂಡ್ ಇಂಚಾರ್ಜ್ ಸಂತೋಷ್ ತಲೆಗೆ ಹಾಕಿ ಸ್ಟಿಕ್ ನಿಂದ ಹೊಡೆದಿದ್ದಾರೆ. ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, 9 ಸ್ಟಿಚ್ ಹಾಕಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.