ಇದು ಬೈಕ್ ಅಲ್ಲ, ಎರಡು ಚಕ್ರದ ಕಾರು !! | ಕಾರಿನ ಹಲವಾರು ವೈಶಿಷ್ಟ್ಯ ಹೊಂದಿರುವ “ಆದಿವಾ AD 200” ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಹೊಸ ಫೀಚರ್‌ಗಳಿರುವ ಬೈಕ್‌ಗಳತ್ತ ಹಲವರು ಒಲವು ತೋರುತ್ತಾರೆ. ಆದರೆ, ಇನ್ನೂ ಕೆಲವರು ಹಳೆ ಬೈಕ್‌ನ ಮಾರ್ಪಾಡು ಮಾಡುವ ಮೂಲಕ ಅದಕ್ಕೆ ಹೊಸ ಲುಕ್ ನೀಡುವತ್ತ ಮನ ಮಾಡುತ್ತಾರೆ. ಅದಲ್ಲದೆ, ನಿಮ್ಮ ಮೋಟಾರ್‌ಸೈಕಲ್‌ಗೆ ಎಸಿ, ಮ್ಯೂಸಿಕ್ ಸಿಸ್ಟಮ್, ವಿಂಡ್‌ಸ್ಕ್ರೀನ್ ಮತ್ತು ರೂಫ್ ಇರಬೇಕು ಎಂದೆಲ್ಲ ಯೋಚಿಸಿದ್ದೀರಾ. ಆದರೆ ಇಂತಹ ಬೈಕ್ ಜಗತ್ತಿನಲ್ಲಿ ಬಹಳ ವರ್ಷಗಳ ಹಿಂದೆಯೇ ಬಂದಿದೆ. ಅದರ ಹೆಸರು ಆದಿವಾ AD 200.

ನಾವು ಬಳಸುವ ವಾಹನ 2 ಚಕ್ರ ಅಥವಾ 4 ಚಕ್ರದ ವಾಹನವಾಗಿರಲಿ, ಮೊದಲನೆಯದಾಗಿ ಅದರ ಎಂಜಿನ್ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದಿವಾ AD 200 (Adiva AD 200) 171cc ಸಿಂಗಲ್ ಸಿಲಿಂಡರ್ 4-ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 15.8hp ಪವರ್ ಮತ್ತು 15.3 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಈ ಕಾರಿನಂತಹ ಬೈಕ್ ತೂಕ 172 ಕೆ.ಜಿ. ಎಂದರೆ ನಿಮಗೆ ಅಚ್ಚರಿ ಆಗಬಹುದು.

ಈ ದ್ವಿಚಕ್ರ ವಾಹನದಲ್ಲಿ ಕಂಪನಿಯು ಒದಗಿಸಿದ ಮೇಲ್ಛಾವಣಿಯು ಅಂದರೆ ರೂಫ್ ಮಡಚಿಕೊಳ್ಳುತ್ತದೆ ಮತ್ತು ಹಿಂದಿನ ಟ್ರಂಕ್‌ನಲ್ಲಿ ಲಾಕ್ ಆಗುತ್ತದೆ. ಹ್ಯಾಂಡಲ್‌ಬಾರ್‌ನ ಕೆಳಗೆ ಕಾರಿನಂತಹ ಡ್ಯಾಶ್‌ಬೋರ್ಡ್, ಮ್ಯೂಸಿಕ್ ಸಿಸ್ಟಮ್‌ಗೆ ಸ್ಥಳಾವಕಾಶ, ಎರಡೂ ಬದಿಗಳಲ್ಲಿ ಎಸಿ ವೆಂಟ್‌ಗಳು ಮತ್ತು ಸ್ಪೀಕರ್‌ಗಳಿವೆ. ಈ ಕಾರಿನಂತಹ ಬೈಕು ಹಿಂಬದಿ ಸವಾರಿಗಾಗಿ ಕ್ಯಾಪ್ಟನ್ ಸೀಟ್ ಅನ್ನು ಸಹ ಹೊಂದಿದೆ. ಇದು ಹೆಡ್ ರೆಸ್ಟ್ ಮತ್ತು ಆರ್ಮ್ ರೆಸ್ಟ್ ಅನ್ನು ಸಹ ಒದಗಿಸುತ್ತದೆ. ಇದು ಸಿಗರೇಟ್ ಲೈಟರ್, ವಿಂಡ್ ಸ್ಕ್ರೀನ್ ಮತ್ತು ಕಾರಿನಂತೆ ಸ್ವಚ್ಛಗೊಳಿಸಲು ವೈಪರ್ಗಳನ್ನು ಹೊಂದಿದೆ. ಅದೇನೆಂದರೆ, ಈ ವಿದೇಶಿ ಬೈಕ್‌ನಲ್ಲಿ ಕಾರಿನ ಹಲವು ವೈಶಿಷ್ಟ್ಯಗಳು ಕಂಡು ಬರುತ್ತವೆ.

ಆದಿವಾ ಈಗ ಬೈಕ್‌ನ ನವೀಕರಿಸಿದ ಆವೃತ್ತಿಯಾದ ಆದಿವಾ AD1 200 ಅನ್ನು ಸಹ ಬಿಡುಗಡೆ ಮಾಡಿದೆ. ಇದು ಮುಂಭಾಗದಲ್ಲಿ ಎರಡು ಚಕ್ರಗಳನ್ನು ಮತ್ತು ಹಿಂಭಾಗದಲ್ಲಿ ಒಂದು ಚಕ್ರವನ್ನು ಹೊಂದಿದೆ. ಇದರ ಮಾರಾಟ ಭಾರತದಲ್ಲಿ ಲಭ್ಯವಿಲ್ಲದ ಕಾರಣ ನೀವು ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ಮಾದರಿಯು ಯುರೋಪ್ ಮತ್ತು ಜಪಾನೀಸ್ ವಾಹನ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ.

Leave A Reply

Your email address will not be published.