ಮೀನು ಖರೀದಿಗೆ ಬಹಿಷ್ಕಾರ ಹಾಕಿದಾಗ ಮುಸ್ಲಿಂರಿಗೆ ಸಾಮರಸ್ಯ ನೆನಪಿರಲಿಲ್ಲವೇ?

0 8

ಉಡುಪಿ : ಕರಾವಳಿಯಲ್ಲಿ ನಿರಂತರವಾಗಿ ಗೋ ಕಳ್ಳ ಸಾಗಣೆ ನಡೆಯುತ್ತಿದ್ದು, ತಲವಾರು ಹಿಡಿದು ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡಲಾಗುತ್ತಿದೆ. ಗೋವು ಹತ್ಯೆ ವಿರುದ್ಧ ಗಂಗೊಳ್ಳಿಯಲ್ಲಿ ಪ್ರತಿಭಟನೆ ಮಾಡಲಾಗಿದ್ದು, ಪ್ರತಿಭಟನೆಯ ಮರುದಿನವೇ ಮುಸಲ್ಮಾನರು ಮೀನು ಖರೀದಿಗೆ ಬಹಿಷ್ಕಾರ ಹಾಕಿದ್ದು, ಆಗ ಸಾಮರಸ್ಯ ನೆನಪಿರಲಿಲ್ಲವೇ? ಬಹಿಷ್ಕಾರದ ನಡೆ ಆರಂಭವಾಗಿದ್ದೇ ಅವರಿಂದ ಎಂದು ಭಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ ತಿಳಿಸಿದ್ದಾರೆ.

ಹಿಂದೂಗಳ ಜೊತೆ ವ್ಯವಹಾರ ಮಾಡುವುದಿಲ್ಲ ಎಂದು ಮುಸಲ್ಮಾನರು ತೀರ್ಮಾನಿಸಿದ್ದು, ಅವರ ಮಾನಸಿಕತೆ ಏನು ಎಂಬುದು ನಮಗೆ ಗೊತ್ತಾಗಿದೆ. ಬಹಿಷ್ಕಾರದ ನಡೆ ಆರಂಭವಾಗಿದ್ದೇ ಅವರಿಂದ ಎಂದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯಗೆ ಮುಸಲ್ಮಾನರ ಬಗ್ಗೆ ಅನುಕಂಪ ಕಾಳಜಿ ಶುರುವಾಗಿದೆ.ನಿಮ್ಮ ಅನುಕಂಪ ಗಂಗೊಳ್ಳಿಯ ಮೀನುಗಾರರ ಮೇಲೆ ಯಾಕಿಲ್ಲ? ಗಂಗೊಳ್ಳಿಯ ಮುಸಲ್ಮಾನರ ಬಹಿಷ್ಕಾರದ ಬಗ್ಗೆ ನೀವು ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು

ಇನ್ನು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣದಂತಹ ನಿಮ್ಮ ನಡೆ ಯಾಕೆ. ನೀವು ರಾಜಕಾರಣಿಯಾಗಿ ರಾಜಕೀಯ ಮಾಡಿ, ಹಿಂದುತ್ವದ ವಿಚಾರದಲ್ಲಿ ನೀವು ದೂರ ಇರುವುದೇ ಒಳ್ಳೆಯದು ಎಂದು ಸುನೀಲ್ ಕೆ.ಆರ್ ಹೇಳಿದ್ದಾರೆ.

Leave A Reply