ಪುತ್ತೂರು: ಬೀದಿ ಬೀದಿಯಲ್ಲಿ ಹಿಂದೂ ಯುವಕರ ಹೆಣ ಬೀಳಲು ಬಕ ಪಕ್ಷಿಗಳಂತೆ ಕಾಯುತ್ತಿರುವವರು ಯಾರು!?? ಶರತ್ ಮಡಿವಾಳನಂತೆ ನಿನ್ನನ್ನೂ ಮುಗಿಸುತ್ತೇವೆ ಎಂಬ ಬೆದರಿಕೆ-ದೂರು ದಾಖಲಾದರೂ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ

ಪುತ್ತೂರು: ಹಿಂದೂ ಸಂಘಟನೆಗಳ ಯುವ ನಾಯಕ, ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ್ ಈಶ್ವರಮಂಗಲ ಅವರಿಗೆ ಕೊಲೆ ಬೆದರಿಕೆ ಬಂದು ಪೊಲೀಸ್ ದೂರು ನೀಡಿದ್ದರೂ ಪೊಲೀಸರು ಯಾವ ಕ್ರಮವೂ ಜರುಗಿಸದೆ ಇರುವುದು ಪ್ರಶ್ನೆಗೆ ಕಾರಣವಾಗಿದೆ.

ಪುತ್ತೂರು ನಗರದಲ್ಲಿ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ತನ್ನ ಕಾರ್ಯಚಟುವಟಿಕೆ ಮೂಲಕ ಮನೆಮಾತಾಗಿದ್ದ ಚಂದ್ರಹಾಸ್ ಅವರನ್ನು ಮಾನಸಿಕವಾಗಿ ಕುಗ್ಗಿಸುವ ದೃಷ್ಟಿಯಿಂದ ಕಿಡಿಗೇಡಿಗಳು ಕೊಲೆ ಬೆದರಿಕೆ ಒಡ್ಡಿದ್ದು,ಕೆಲ ವರ್ಷಗಳ ಹಿಂದೆ ಬಿ.ಸಿ ರೋಡ್ ನಲ್ಲಿ ನಡೆದ ಶರತ್ ಮಡಿವಾಳನ ಹತ್ಯೆಯಂತೆಯೇ ನಿನ್ನನ್ನೂ ಮುಗಿಸುತ್ತೇವೆ ಎಂದು ಫೋನ್ ಕರೆಯೊಂದರ ಮೂಲಕ ಬೆದರಿಕೆ ಬಂದಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಪೊಲೀಸರು ಮಾತ್ರ ದೂರನ್ನು ಪಕ್ಕಕ್ಕೆ ಸರಿಸಿ ಉಡಾಫೆತನ ತೋರಿಸಿದ್ದು, ಪೊಲೀಸರೇ ಹಿಂದೂ ಯುವಕರ ಹೆಣ ಬೀಳಲು ಬಕ ಪಕ್ಷಿಗಳಂತೆ ಕಾಯುತ್ತಿರುವುದು ಸ್ಪಷ್ಟವಾಗುತ್ತಿದೆ. ದೂರು ಸಲ್ಲಿಸಿ ಒಂದು ವಾರ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಒಟ್ಟಾಗಿದ್ದು, ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಆರೋಪಿಗಳು ಯಾರೆಂಬುವುದನ್ನು ಪತ್ತೆ ಹಚ್ಚದೆ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಗಿದೆ.

error: Content is protected !!
Scroll to Top
%d bloggers like this: