ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುತ್ತದೆಯೇ ? ಇಲ್ಲಿದೆ ಹೈಕೋರ್ಟ್ ಆದೇಶ

ಜಾತಿ ಎಂಬುದು ಜೀವನದ ಅವಿಭಾಜ್ಯ ಅಂಗ. ಜಾತಿ ನಮ್ಮ ಜೊತೆ ಹುಟ್ಟಿದೆಯೇ ? ಎಂದು ಹಲವರು ಪ್ರಶ್ನೆ ಮಾಡುತ್ತಾರೆ.
ತಂದೆಯ ಜಾತಿಯನ್ನು ಮಕ್ಕಳು ಪಡೆಯುತ್ತಾರೆ. ಜನ್ಮದ ಆಧಾರದ ಮೇಲೆ ಜಾತಿ ನಿರ್ಧಾರವಾಗುತ್ತದೆ. ಆದರೆ ಭಾರತದ ಸಂಸ್ಕೃತಿಯ ಪ್ರಕಾರ ಹೆಣ್ಣು ಮದುವೆಯಾದ ನಂತರ ಗಂಡನ ಜಾತಿಗೆ ವರ್ಗವಾಗುತ್ತಾಳೆ. ಇದನ್ನು ಹಲವರು ವಿರೋಧಿಸುತ್ತಾರೆ. ಹಲವರು ಪರವಾಗಿದ್ದಾರೆ.

ಇಲ್ಲೊಂದು ಗ್ರಾಮ ಪಂಚಾಯತಿ ಪ್ರಕರಣ ಹೈಕೋರ್ಟ್ ಮಹತ್ವದ ಆದೇಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಎಸ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪತಿಯ ಪರಿಶಿಷ್ಟ ವರ್ಗವೇ ತನಗೂ ಅನ್ವಯವಾಗುತ್ತದೆ ಎಂದು ವಾದಿಸಿದ್ದರು. ಸಿವಿಲ್ ಕೋರ್ಟ್ ಸದಸ್ಯೆ ಆಯ್ಕೆ ಅಸಿಂಧುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗ್ರಾಪಂ ಸದಸ್ಯೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.

Leave A Reply

Your email address will not be published.