ಹಿಜಾಬ್ ಕಿಡಿ : ವೈದ್ಯರ ಬಳಿ ಹೋದಾಗ ಎಲ್ಲಾ ಬಿಚ್ಚಿ ತೋರಿಸುತ್ತೇವೆ, ಹಾಗಾಗಿ (
***) ಮುಚ್ಕೊಂಡು ಶಾಲೆಗೆ ಹೋಗಬೇಕು – ಹಿರಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ವಿವಾದಾತ್ಮಕ ಹೇಳಿಕೆ

0 1

ಹಿಜಾಬ್ ಕುರಿತು ರಾಜಕೀಯ ನಾಯಕರು ನೀಡುತ್ತಿರುವ ಹಾಗೂ ನೀಡಿರುವ ಹೇಳಿಕೆಗಳು ವಿವಾದ ಹೊತ್ತಿಸುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಆಗಿದೆ. ಈಗ ಅಂಥದ್ದೇ ವಿವಾದದ ಕಿಚ್ಚು ಹೊತ್ತಿಸುವಂತಹ ಹೇಳಿಕೆಯೊಂದನ್ನು ಹಿರೇಮಗಳೂರು ಕಣ್ಣನ್ ನೀಡಿದ್ದಾರೆ.

ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಮೈಸೂರಿನ ವನರಂಗದಲ್ಲಿ ಮಾತನಾಡಿದ ಕಣ್ಣನ್ ಅವರು, ಹಿಜಾಬ್ ಕುರಿತು ನೀಡಿದ ಹೇಳಿಕೆ ವಿವಾದ ಹುಟ್ಟು ಹಾಕುವಂತಿದೆ.

‘ ಹಲವು ಬಾರಿ ಮಾತನಾಡುವುದು ಅನಿವಾರ್ಯ. ಆದರೆ ಮಾತನಾಡುವುದಕ್ಕೆ ಭಯ ಪಡಬಾರದು. ಇನ್ಮುಂದೆ ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗಬಾರದು. ಇನ್ನು ಮುಂದೆ (***) ಮುಚ್ಚಿಕೊಂಡು ಶಾಲೆಗೆ ಹೋಗಬೇಕು. ವೈದ್ಯರ ಬಳಿ ಹೋದಾಗ ಎಲ್ಲವನ್ನೂ ಬಿಚ್ಚಿ ತೋರಿಸುತ್ತೇವೆ. ಹಾಗಿರುವಾಗ ಈ ವಿಚಾರ ಮಾತನಾಡುವುದಕ್ಕೆ ಭಯ ಏಕೆ ಬೇಕು ಎಂದು ಹಿರೇಮಗಳೂರು ಕಣ್ಣನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಈಗ ಹಲವರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇವರ ಈ ಮಾತಿಗೆ ಹಲವಾರು ಲೇಖಕರು, ವಾಗ್ಮಿಗಳು, ಚಿಂತಕರು ಆಕ್ರೋಶ ಹೊರಹಾಕಿದ್ದಾರೆ.

Leave A Reply