ಕಿವಿಯೋಲೆ ಆಸೆಗೆ ಜೀವ ಕಳೆದುಕೊಂಡಳೆ ಮಹಿಳೆ ? ಚಿಕಿತ್ಸೆಯಿಂದ ಸಾವನ್ನಪ್ಪಿದ ನಾರಿ; ಆಗಿದ್ದಾದರೂ ಏನು ?

ಕಿವಿ ದೇಹದ ಸುಂದರ ಅಂಗ.‌ ಹೆಣ್ಣುಮಕ್ಕಳಿಗಂತೂ ಕಿವಿ ಸಿಂಗಾರ, ಕಿವಿಯೋಲೇ ಧರಿಸುವುದು ಅಪಾರ ಇಷ್ಟ, ಅದು ಸುಂದರತೆಯನ್ನು ಹೆಚ್ಚಿಸುತ್ತದೆ. ಆದರೆ ಇಲ್ಲೊಬ್ಬ ಮಹಿಳೆಯ ಕಿವಿ ಅವರ ಸಾವಿಗೆ ಕಾರಣವಾಗಿದೆ ! ಕಿವಿಯೊಲೆ ಧರಿಸುವ ಆಸೆ ಪ್ರಾಣವನ್ನು ಪಡೆದಿದೆ !  ಕಿವಿ ಚಿಕಿತ್ಸೆಗೆ ಹೋದ ಮಹಿಳೆ ಹೆಣವಾಗಿ ಬಂದಿದ್ದಾರೆ.

ಕಿವಿ ಚಿಕಿತ್ಸೆಗೆ ಬಂದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಜಿಮ್ಸ್ ವೈದ್ಯರ ಯಡವಟ್ಟಿನಿಂದಾಗಿ ಮಹಿಳೆ ಸಾವನ್ನಪ್ಪಿದ್ದಾರೆ.

ಹೊಸ ಕಿವಿಯೋಲೆ ಧರಿಸಲು ಶಸ್ತ್ರ ಚಿಕಿತ್ಸೆ ಮೂಲಕ ಕಿವಿ ತೂತು ಮುಚ್ಚಿಸಿಕೊಳ್ಳಲು, ಗದಗ ತಾಲೂಕಿನ ಕಣವಿ-ಹೊಸೂರು ಗ್ರಾಮದ ಸುಮಿತ್ರ ಬಡಿಗೇರ (35) ಬಂದಿದ್ದರು. ಸಾವಿಗೀಡಾಗಿದ್ದಾರೆ. ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವೀಗಿಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಯಾವ ಇಂಜೆಕ್ಷನ್ ಕೊಟ್ಟರೋ ಗೊತ್ತಿಲ್ಲ. ಆರಾಮಾಗಿದ್ದಾಕೆ ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನ್ಯಾಯ ಬೇಕು. ವೈದ್ಯರ ಮೇಲೆ ಕ್ರಮ ಕೈಗೊಳ್ಳಿ ಅಂತ ಆಕ್ರೋಶ ವ್ಯಕ್ತಪಡಿಸಿ, ಅಂಬ್ಯುಲೆನ್ಸ್ ಚಕ್ರದಡಿ ಸಿಲುಕಿ ಸಾಯಲು ಮೃತ ಮಹಿಳೆ ಪತಿ ಯತ್ನಿಸಿದ್ದಾರೆ.

Leave A Reply

Your email address will not be published.