ಈ ಜೋಡಿ 30 ವರ್ಷದಲ್ಲಿ ಒಮ್ಮೆಯೂ ಜಗಳವಾಡಿಲ್ಲವಂತೆ ! ಅನ್ಯೋನ್ಯತೆಯ ಗುಟ್ಟನ್ನು ರಟ್ಟುಮಾಡಿದ್ದಾರೆ ನೋಡಿ

ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಜಗಳವಾಡದ ಪತಿ ಪತ್ನಿಯರೇ ಇಲ್ಲ. ಜಗಳ ಪ್ರೀತಿಯ ಸಂಕೇತ. ಜಗಳದ ಮುನಿಸು ಪ್ರೀತಿಯಿಂದ ಮುಕ್ತಾಯವಾಗುತ್ತದೆ‌ ಆದರೆ ಕೆಲವೊಮ್ಮೆ ಜಗಳ ಮಿತಿ ಮೀರಿ ಎಷ್ಟೊ ದಾಂಪತ್ಯ ಜೀವನ ವಿಚ್ಛೇದನದಿಂದ ಮುಕ್ತಾಯವಾಗುತ್ತದೆ. ಆದರೆ  ಇಲ್ಲೊಂದು ಜೋಡಿ ದಾಂಪತ್ಯದಲ್ಲಿ ಜಗಳವೇ ಆಡಿಲ್ಲವಂತೆ !  ಮದುವೆಯಾಗಿ ಒಂದು ಎರಡು ಅಲ್ಲ 30 ವರ್ಷಕಳೆದರೂ ಇನ್ನು ಒಂದು ಬಾರಿಯೂ ಜಗಳವಾಡಿಲ್ಲಂತೆ ಈ ಜೊಡಿ ! ಕಾರಣವೇನು ಗೊತ್ತೆ ?

ಹನ್ನಾ ಕೀಲೇ ಮತ್ತು ಆಕೆಯ ಪತಿ ಬ್ಲೇರ್ ಕೀಲೇ ಈ ದಂಪತಿ ಅಮೆರಿಕದ ವರ್ಜೀನಿಯಾದ ನಿವಾಸಿಗಳಾಗಿದ್ದು, ಏಳು ಮಕ್ಕಳಿದ್ದಾರೆ ಲ. ತಮ್ಮ 30 ವರ್ಷದ ವೈವಾಹಿಕ ಜೀವನದಲ್ಲಿ ಒಂದೇ ಒಂದು ಬಾರಿಯೂ ವಾದ ವಿವಾದವನ್ನು ಮಾಡಿಲ್ಲ ಎಂದು ಹೇಳಿ ಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ದಾಂಪತ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ ಈ ಜೊಡಿ. ಸಂಬಂಧಗಳು ಒಂದು ಕೌಶಲ್ಯ, ಉಡುಗೊರೆಯಲ್ಲ” ಎಂದು ದಂಪತಿಗಳು ಇತ್ತೀಚಿನ ದಂಪತಿಗಳಿಗೆ ಕೆಲವು ಸಲಹೆಗಳನ್ನು ಸಹ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ‌.

*ದಾಂಪತ್ಯದಲ್ಲಿ ಈ ಪದವನ್ನು ಬಳಸಬೇಡಿ ಎಂದಿದ್ದಾರೆ ಈ ಜೋಡಿ. ಅದು ಯಾವುದೆಂದರೆ .; “ಹೀಗೆ ಇರಬೇಕು” ಎಂಬ ಪದ ಬಳಸಬೇಡಿ. ಅವನು ಅಥವಾ ಅವಳು ಇದನ್ನು ಮಾಡಲೇಬೇಕು ಮತ್ತು ಹೀಗೆ ಇರಬೇಕು ಇತ್ಯಾದಿ ನಿರೀಕ್ಷೆಗಳನ್ನು ಅವರ ಮೇಲೆ ಹೆರಲೇಬೇಡಿ.

*ನಿಮ್ಮ ನಿಮ್ಮ ವೃತ್ತಿಯಲ್ಲಿ ಬೆಳೆಯಲು ಪರಸ್ಪರ ಸವಾಲು ಹಾಕಿಕೊಳ್ಳಿ ಆದರೆ ಒತ್ತಡ ಹೇರಬೇಡಿ ಎಂದಿದ್ದಾರೆ.

  • ಪರಸ್ಪರ ಮಾತುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿರಿ. ಸಂಭಾಷಣೆ ನಡೆಸುವಾಗ ಅಭಿವ್ಯಕ್ತಿ, ಸ್ವರ ಮತ್ತು ಸನ್ನೆಗಳನ್ನು ಪರಸ್ಪರ ಸರಿಯಾಗಿ ಅರ್ಥಮಾಡಿಕೊಳ್ಳಿ.
  • ಮಲಗುವ ಮುನ್ನ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ; ದಂಪತಿ ಕೋಪದಿಂದ ಯಾವತ್ತೂ ಮಲಗಬಾರದು‌. ದಂಪತಿಗಳು ಮಲಗುವ ಮೊದಲು ತಮ್ಮ ಅಂದಿನ ದಿನದ  ಸಮಸ್ಯೆಗಳನ್ನು, ಬೇಸರಗಳನ್ನು, ಭಿನ್ನಾಭಿಪ್ರಾಯಗಳನ್ನು ಅಂದೇ ಪರಿಹರಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
Leave A Reply

Your email address will not be published.