ಪೋಸ್ಟ್ ಮಾರ್ಟಮ್ ಮೇಜಿನ ಮೇಲೆಯೇ ಹುಟ್ಟುಹಬ್ಬದ ಕೇಕ್ ಕಟ್ಟಿಂಗ್ !! | ಶವಾಗಾರದ ಪಕ್ಕದ ಕೋಣೆಯಲ್ಲಿಯೇ ಗುಂಡು- ತುಂಡಿನೊಂದಿಗೆ ಮೋಜು ಮಸ್ತಿ- ಫೋಟೋ ಲೀಕ್

ಮನೆಗಳಲ್ಲಿ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಭರ್ಜರಿಯಾಗಿ ಹುಟ್ಟುಹಬ್ಬದ ಪಾರ್ಟಿ ಮಾಡೋದು ಮಾಮೂಲು. ಆದರೆ ಇಲ್ಲೊಂದು ಕಡೆ ಜನರು ಕುಳಿತುಕೊಳ್ಳಲೂ ಸಾಧ್ಯವಿಲ್ಲದ ಸ್ಥಳದಲ್ಲಿ ಭರ್ಜರಿ ಪಾರ್ಟಿ ನಡೆದಿದೆ. ಹೌದು. ಮರಣೋತ್ತರ ಪರೀಕ್ಷೆ ಮಾಡುವ ಮೇಜಿನ ಮೇಲೆ ಹುಟ್ಟುಹಬ್ಬದ ಪಾರ್ಟಿ ಮಾಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ರಾತ್ರಿ ವೇಳೆ ಸಾರ್ವಜನಿಕ ಆಸ್ಪತ್ರೆಯ ಶವಗಾರದ ಪಕ್ಕದ ಹಾಲ್‌ನಲ್ಲಿ ಭರ್ಜರಿ ಪಾರ್ಟಿ ಮಾಡಿರುವುದು ಪತ್ತೆಯಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಶವಾಗಾರದ ಪಕ್ಕದಲ್ಲಿರುವ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಈ ಘಟನೆ ನಡೆದಿದೆ.

ಸದ್ಯಪಾರ್ಟಿ ಮಾಡಿದವರೆಲ್ಲರು ಸರ್ಕಾರಿ ನೌಕರರು ಎಂದು ತಿಳಿದುಬಂದಿದೆ. ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಬಿ.ಪಾಟೀಲ್ ಮಾತನಾಡಿ, ಶುಕ್ರವಾರ ಬೆಳಗ್ಗಿನ ಜಾವ 1.30 ರ ಸುಮಾರಿಗೆ ಹಲವಾರು ಶವಗಳನ್ನು ಇರಿಸಲಾಗಿತ್ತು. ಪೋಸ್ಟ್ ಮಾರ್ಟಮ್ ಮಾಡುವ ಮೇಜಿನ ಮೇಲೆಯೇ ಪಾರ್ಟಿ ಮಾಡಿರುವುದು ಬೆಳಕಿಗೆ ಬಂದಿದೆ. ಪತ್ರಕರ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನಾವು ಪ್ರಾಥಮಿಕ ವರದಿಯನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ.

Leave A Reply