ಬಾಡಿಗೆ ತಾಯಿ ಮೂಲಕ ಮಗುವಿಗೆ ಜನ್ಮ ನೀಡಲಿದ್ದಾರೆ ‘ ಲೇಡಿ ಸೂಪರ್ ಸ್ಟಾರ್ ‘ ನಯನತಾರಾ !

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ‌ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ನಗು, ನಟನೆಯಿಂದಲೇ ಎಲ್ಲರ ಮನ ಗೆದ್ದ ನಟಿ. ಯಾವುದೇ ಸ್ಟಾರ್ ಹೀರೋಗೆ ಕಮ್ಮಿಯಾಗದಷ್ಟು ಸ್ಟಾರ್ ಡಂ ಈ ಹೀರೋಯಿನ್ ಗಿದೆ. ಹಾಗೆನೇ ವಿಶ್ವದ ಮೂಲೆ ಮೂಲೆಯಲ್ಲೂ ನಯನತಾರಾಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. 37 ವರ್ಷ ಈ ನಟಿ ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ. ಅದಕ್ಕೆ ದಕ್ಷಿಣ ಭಾರತದ ಚಿತ್ರರಂಗ ಈಕೆಯನ್ನು ಲೇಡಿ ಸೂಪರ್‌ಸ್ಟಾರ್ ಎಂದು ಬಿರುದನ್ನೇ ನೀಡಿದೆ.

ಇಷ್ಟೇ ಅಲ್ಲ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ
ಕೆಲವೇ ಕೆಲವು ನಟಿಯರಲ್ಲಿ ನಯನತಾರಾ ಕೂಡ ಒಬ್ಬರು.


Ad Widget

Ad Widget

Ad Widget

ಒಂದು ಕಾಲದಲ್ಲಿ ಪ್ರೀತಿಯ ವಿಚಾರದಲ್ಲಿ ನಯನತಾರಾ ಎಡವಿದ್ದು ನಿಜ. ಅನಂತರ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಯಲ್ಲಿ ಖುಷಿಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ನಯನತಾರಾ ಹಾಗೂ ವಿಘ್ನೇಶ್ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಇವರಿಬ್ಬರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು
ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದಾರೆ. ವಿವಾಹದ ಬಳಿಕವೇ ಮಗು ಪಡೆಯಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

Leave a Reply

error: Content is protected !!
Scroll to Top
%d bloggers like this: