ಇಂದು ವಿಶ್ವ ಅರಣ್ಯ ದಿನ; ತಿಳಿಯಿರಿ ಈ ದಿನದ ಇತಿಹಾಸ ಮತ್ತು ಮಹತ್ವ

ಪ್ರತಿ ವರ್ಷ ಮಾರ್ಚ್‌ 21 ನ್ನು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತದೆ. ಅರಣ್ಯವೆಂದರೆ ಅದು ಸಸ್ಯ ಸಂಪತ್ತು. ಸಾವಿರಾರು ಜಾತಿ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವವೈವಿಧ್ಯ ಸೂಕ್ಷ್ಮಾಣುಗಳೊಂದಿಗೆ ರೂಪುಗೊಂಡಿರುವ ತಾಣ. ಅರಣ್ಯಗಳಲ್ಲಿ ರಸ್ತೆಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಜಲ ವಿದ್ಯುತ್‌ ಘಟಕಗಳ ಸ್ಥಾಪನೆಯೂ ಅರಣ್ಯದ ಮೇಲೆಯೇ ಅನಗತ್ಯ ಒತ್ತಡ ಹೇರಲಾಗುತ್ತಿದೆ.

ಒಂದು ದೇಶದ ಪ್ರಾಕೃತಿಕ ಸಮತೋಲನಕ್ಕೆ ಆ ದೇಶದ ಒಟ್ಟು ಭೂ ಪ್ರದೇಶದಲ್ಲಿ ಶೇ 33 ಅರಣ್ಯ ಪ್ರದೇಶ ಇರಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ ಸದ್ಯ ಈ ಪ್ರಮಾಣ ಶೇ 20 ರ ಆಸುಪಾಸಿನಲ್ಲಿದೆ. ಹಾಗಾಗಿ ಈ ಬಾರಿ ಇಂದು ವಿಶ್ವ ಅರಣ್ಯ ದಿನ ಈ ಬಾರಿ ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ ಎನ್ನುವ  ಥೀಮ್​ನಲ್ಲಿ ಆಚರಿಸಲಾಗುತ್ತಿದೆ.‌

ವಿಶ್ವಸಂಸ್ಥೆ ಸಾಮಾನ್ಯ ಅಧಿಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆದು ಸದ್ಯದ ಜತೆಗೆ ಮುಂದಿನ ಪೀಳಿಗೆಗೂ ಅರಣ್ಯ ಸಂರಕ್ಷಿಸಲು ಅಂತಾರಾಷ್ಟ್ರೀಯ ಅರಣ್ಯ ದಿನ ಆಚರಣೆ ನಿರ್ಧಾರಕ್ಕೆ ಬರಲಾಯಿತು. ಹಾಗು 1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಯಿತು. ಮತ್ತು 2012ರಲ್ಲಿ ಅಂತಾರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ಆರು ದಿನಗಳ ಅರಣ್ಯ ದಿನಗಳ ಕಾರ‍್ಯಕ್ರಮ ರೂಪಿಸಿ ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸುವಂತೆ ಮಾಡಿತು.

 ಒಂದೆಡೆ ಅರಣ್ಯದ ಪ್ರಮಾಣ ತಗ್ಗುತ್ತಿದ್ದರೆ ಭಾರತದಲ್ಲಿಯೇ ಮರದ ಕೊರತೆ ಎದುರಾಗಿ ಪ್ರತಿ ವರ್ಷ 39 ಸಾವಿರ ಕೋಟಿ ಮೌಲ್ಯದ ಮರ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೃಕೃತಿ ಮನುಷ್ಯನ ಆಸೆಗಳನ್ನು ಪೂರೈಸುತ್ತದೆ. ದುರಾಸೆಯನ್ನಲ್ಲ. ಮನುಷ್ಯ ಅರಣ್ಯವನ್ನು ಉಳಿಸದಿದ್ದರೆ ಮನುಷ್ಯ ಅಳಿವಿನಂಚಿಗೆ ಹೋಗುತ್ತಾನೆ.

Leave A Reply

Your email address will not be published.