ಪೋಸ್ಟ್ ಮ್ಯಾನ್ ವೃತ್ತಿ ಮಾಡುತ್ತಲೇ ಬಿಎ ಯಲ್ಲಿ ಸೆಕೆಂಡ್ ರ್ಯಾಂಕ್ ಪಡೆದ ಯುವಕ !

ಮಾರ್ಚ್ 17 ರಂದು ಬೆಂಗಳೂರು ಸಿಟಿ ವಿಶ್ವವಿದ್ಯಾಲಯವು ವಿವಿಧ ಪರೀಕ್ಷೆಯ ಫಲಿತಾಂಶ ಪ್ರಕಟಿಸಿತ್ತು. ಈ ಫಲಿತಾಂಶ ಒಬ್ಬರ ಬಾಳಲ್ಲಿ ಬೆಳಕು ಮೂಡಿಸಿದೆ. ಅವರೇ ಸಂಜಯ್, ಸುಂಕದಕಟ್ಟೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಸಂಜಯ್ ವಿವಿ ಪುರಂ ಸಂಜೆ ಕಾಲೇಜಿನಲ್ಲಿ ಓದುತ್ತಿದ್ದರು.
ಇದೀಗ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದಲ್ಲಿ ಎರಡನೇ ರ್ಯಾಂಕ್ (ಬಿಎ) ಪಡೆದಿದ್ದಾರೆ.

ಸಂಜಯ್ ದಿನಚರಿ : ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಪೋಸ್ಟ್‌ಮ್ಯಾನ್ ವೃತ್ತಿಯಲ್ಲಿ ತೊಡಗಿ ಸಂಜೆ 5.30ರಿಂದ ರಾತ್ರಿ 9.15ರ ವರೆಗೂ ಕಾಲೇಜು ತರಗತಿಗಳಿಗೆ ಹಾಜರಾಗುತ್ತಿದ್ದರು.

ಕುಕರಹಳ್ಳಿ ಮೂಲದ ಇವರು 2018 ರಲ್ಲಿ ಪಿಯು ಮುಗಿಸಿದ
ನಂತರ ಅರ್ಥಶಾಸ್ತ್ರ, ಇತಿಹಾಸ ಮತ್ತು ಬಿಎ ಪ್ರವೇಶ ಪಡೆದಿದ್ದರು. ನಾನು ಪೊಲಿಟಿಕಲ್ ಸೈನ್ಸ್ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಉತ್ಸುಕನಾಗಿದ್ದರಿಂದ ಬಿಎ ವ್ಯಾಸಂಗ ಮಾಡಿದೆ ಎಂದು ಸಂಜಯ್ ಹೇಳುತ್ತಾರೆ.

ತಮ್ಮ ಅಧ್ಯಯನ ಮುಂದುವರಿಸಲು ಪ್ರೋತ್ಸಾಹಿಸಿದ ಮತ್ತು ಪರೀಕ್ಷೆಯ ಸಮಯದಲ್ಲಿ ರಜೆ ನೀಡಿ ಸಹಕರಿಸಿದ ಸುಂಕದಕಟ್ಟೆ ಅಂಚೆ ಕಚೇರಿಯ ಹಿರಿಯ ಸಹೋದ್ಯೋಗಿಗಳಿಗೆ ಸಂಜಯ್ ಈ ಸಮಯದಲ್ಲಿ ಹೃದಯತುಂಬಿ ನೆನಪು ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಂದೆ ಅವರು ಇಲಾಖಾ ಪರೀಕ್ಷೆಗಳಿಗೆ ಮಾತ್ರವಲ್ಲದೆ ಕೆಪಿಎಸ್ಸಿಯ ಸ್ಪರ್ಧಾತ್ಮಕ ಪರೀಕ್ಷೆಗೂ ಹಾಜರಾಗಲು ತಯಾರಿಯಲ್ಲಿ ಇದ್ದಾರೆ.

Leave A Reply

Your email address will not be published.