ಮಂಗಳೂರು : ಕಂದಾವರ ಕೊರ್ದಬ್ವು ದೈವಸ್ಥಾನ ಅಪವಿತ್ರ ,ಭಕ್ತರ ಆಕ್ರೋಶ

0 5

ಮಂಗಳೂರು ತಾಲೂಕಿನ ಕಂದಾವರ ಎಂಬಲ್ಲಿರುವ ಕೊರ್ದಬ್ಬು ದೈವಸ್ಥಾನದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು ದೈವಸ್ಥಾನ ಅಪವಿತ್ರ ಮಾಡಿರುವ ಬಗ್ಗೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೋಮವಾರ ಬೆಳಿಗ್ಗೆ ದೈವಸ್ಥಾನದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು ರಕ್ತದಲ್ಲಿ ಅಡ್ಡಿದ 200 ರೂಪಾಯಿ ನೋಟು ಹಾಗೂ ಒಂದು ಬೆಂಕಿ ಪೆಟ್ಟಿಗೆ ಕಂಡು ಬಂದಿದೆ.

ಸ್ಥಳಕ್ಕೆ ಬಜಪೆ ಪೋಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ಹಿಂದೂ ಮುಖಂಡರು ಕಾರ್ಯ ಕರ್ತರು ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅನುಮಾನದ ಮೇರೆಗೆ ಪೋಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ

Leave A Reply