BEL ನಲ್ಲಿ ಇಂಜಿನಿಯರ್ ಪದವೀಧರರಿಗೆ ಉದ್ಯೋಗವಕಾಶ|ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 23

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಕೇಂದ್ರದಲ್ಲಿ ಆರಂಭಿಸುತ್ತಿರುವ NAVAL Systems (S&CS) ಯೋಜನೆಗೆ 15 ಪ್ರಾಜೆಕ್ಟ್ ಇಂಜಿನಿಯರ್‌ಗಳನ್ನು ಹಾಗೂ 8 ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.

ಈ ಹುದ್ದೆಯು ಕನಿಷ್ಠ 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು,ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಗರಿಷ್ಠ 4 ವರ್ಷಕ್ಕೆ ಅವಧಿ ವಿಸ್ತರಿಸಬಹುದಾಗಿದ್ದು,ಕಾರ್ಯಕ್ಷೇತ್ರ ಬೆಂಗಳೂರು.

ಪ್ರಾಜೆಕ್ಟ್ ಇಂಜಿನಿಯರ್ಸ್ :

15 ಸಾಮಾನ್ಯವರ್ಗ, ಒಬಿಸಿ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್/ ಮೆಕಾನಿಕಲ್ ನಲ್ಲಿ ಪೂರ್ಣಾವಧಿಯ ಬಿಇ/ಬಿ.ಟೆಕ್/ ಬಿಎಸ್ಸಿ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ವ್ಯಾಸಂಗದ ಬಳಿಕ ಕನಿಷ್ಠ 2 ವರ್ಷ ವೃತ್ತಿ ಅನುಭವ ಹೊಂದಿರಬೇಕು.

1.3.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 32 ವರ್ಷ
ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ
ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ. ಮೊದಲ ವರ್ಷ ಮಾಸಿಕ 40,000 ರೂ, 2ನೇ ವರ್ಷ 45,000 ರೂ., 3 ಮತ್ತು 4ನೇ ವರ್ಷಕ್ಕೆ ಕ್ರಮವಾಗಿ 50 ಹಾಗೂ 55 ಸಾವಿರ ರೂ. ವೇತನ ಇರುತ್ತದೆ.

ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ಇದೆ.

ಅಧಿಸೂಚನೆಗೆ : https://bit.ly/3CqLCJb

ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ – 8:

ಬಿಇಎಲ್‌ನ ಬೆಂಗಳೂರು ಘಟಕದಲ್ಲಿ ಕೆಲಸ ನಿರ್ವಹಿಸಲು ನೌಕಾಪಡೆಯ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದ್ದು,ಜೆಸಿಒ ಬ್ಯಾಂಕಿಂಗ್ ಆಧಾರದಲ್ಲಿ 5 ವರ್ಷದ ನಿರ್ದಿಷ್ಟ ಅವಧಿಗೆ 8 ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್/ ಕಮ್ಯುನಿಕೇಷನ್‌ನಲ್ಲಿ ಡಿಪ್ಲೊಮಾ ಮಾಡಿದ್ದು, ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 30,000-1,20,000 ರೂ. ವೇತನ ಹಾಗೂ ಇತರ ಭತ್ಯೆ ನೀಡಲಾಗುವುದು. ಗರಿಷ್ಠ 50 ವರ್ಷ ವಯೋಮಿತಿ ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಆಸಕ್ತ ಅಭ್ಯರ್ಥಿಗಳು Sr.DGM (H Naval Systems SBU, Bharat Electronics Ltd, Jalahalli post, Bangalore – 560 013 ವಿಳಾಸಕ್ಕೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅಧಿಸೂಚನೆಗೆ : https://bit.ly/3KdbACr

ಅರ್ಜಿ ಸಲ್ಲಿಸಲು ಕೊನೆ ದಿನ: 23.3.2022
ಹೆಚ್ಚಿನ ಮಾಹಿತಿಗೆ : http://www.bel-india.in

Leave A Reply

Your email address will not be published.