ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಭೇಟಿಯ ವೇಳೆ ಉಗ್ರರ ದಾಳಿ!! ರಕ್ಷಣಾ ಪಡೆಯ ಯೋಧರಿಗೆ ಗಾಯ- ವಲಸೆ ಕಾರ್ಮಿಕ ಮೃತ್ಯು

0 6

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಭೇಟಿಯ ವೇಳೆ ಉಗ್ರರ ದಾಳಿ ನಡೆದಿದ್ದು, ರಕ್ಷಣಾ ಪಡೆಯ ಯೋಧರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸ್ಥಳೀಯರಲ್ಲದ ವಲಸಿಗರ ಮೇಲೆ ಹಾಗೂ ಶೋಪಿಯಾನ್ ನ ಎರಡು ಪ್ರತ್ಯೇಕ ಸಿ.ಆರ್.ಪಿ.ಎಫ್ ಯೋಧರ ಶಿಬಿರಗಳ ಮೇಲೇಯೂ ದಾಳಿ ನಡೆದಿದ್ದು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಶಾ ನಾವು ಭಯೋದ್ಪಾದಕರ ಮೇಲೆ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲವೂ ನಡೆದಿದೆ ಎನ್ನುತ್ತಾ ಶೌರ್ಯ ಮೆರೆದ ಯೋಧರನ್ನು ಗೌರವಿಸಿದ್ದರು. ಆದರೆ ಈ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

Leave A Reply