ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ‘ಗೋಲ್ಡನ್ ಟೆಂಪಲ್’ ನಲ್ಲಿ ವೃದ್ಧ ಮಹಿಳೆ ಮೇಲೆ ಬೀಡಿ ಸೇದಿದ ಆರೋಪ|

ಸಿಖ್ಖರ ಪವಿತ್ರ ಕ್ಷೇತ್ರ ಅಮರತಸರದ ಗೋಲ್ಡನ್ ಟೆಂಪಲ್‌ನಲ್ಲಿ ಬೀಡಿ ಸೇದಿದ್ದಾಳೆಂದು ಆರೋಪಿಸಿ ಬಿಹಾರದ ವೃದ್ಧ ಮಹಿಳೆ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಆಕೆ ಧೂಮಪಾನ ಮಾಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವೀಡಿಯೋದಲ್ಲಿ ಮಹಿಳೆ ಕ್ಷಮೆ ಕೇಳಿದ್ದಾಳೆ. ಜೊತೆಗೆ ಪವಿತ್ರ ದೇಗುಲದ ನಿಯಮಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾಳೆ. ತಾನು ಸಿಗರೇಟ್ ಹೊರಗೆ ತೆಗೆದಿದ್ದೆ ಆದರೆ ಸೇದಿಲ್ಲ ಎಂದು ಮಹಿಳೆ ಹೇಳಿದ್ದಾಳೆ.


Ad Widget

Ad Widget

Ad Widget

ಪುರುಷರ ಗುಂಪೊಂದು ಗೋಲ್ಡನ್ ಟೆಂಪಲ್‌ನ ಕಟ್ಟಡದೊಳಗೆ ಧೂಮಪಾನ ಮಾಡಿದ್ದಾರೆ ಎಂದು ಆರೋಪಿಸಿ ಈ ವೃದ್ಧ ಮಹಿಳೆಯನ್ನು ಥಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೆಂಪು ಸೀರೆಯುಟ್ಟ ಮಹಿಳೆಯೊಬ್ಬರು ಮಗುವಿನ ಪಕ್ಕದಲ್ಲಿ ಕುಳಿತಿರುವುದು ಈ ವಿಡಿಯೋದಲ್ಲಿದೆ.

ಶಿರೋಮಣಿ ಗುರುದ್ವಾರ ಪರ್ಬಂಧಕ್ ಕಮಿಟಿ (ಎಸ್‌ಜಿಪಿಸಿ) ಕಾರ್ಯಕರ್ತರು ಈ ಮಹಿಳೆಗೆ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವುದು ಮತ್ತು ಕಪಾಳಮೋಕ್ಷ ಮಾಡಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು.

Leave a Reply

error: Content is protected !!
Scroll to Top
%d bloggers like this: