ಜಪಾನ್ ಪ್ರಧಾನಿಗೆ ಮೋದಿ ಕೊಟ್ಟ ಉಡುಗೊರೆ ಏನು ಗೊತ್ತೆ ?

ಒಂದು ದೇಶ ಮತ್ತೊಂದು ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿದಾಗ ಮಾತೃ ಒಳ್ಳೆಯ ಪ್ರಗತಿ ಆಗಲು ಸಾಧ್ಯ. ಮೋದಿ ಅನೇಕ ದೇಶದೊಡನೆ ಭದ್ರವಾದ ಉತ್ತಮ ಸಂಬಂಧ ಹೊಂದಿದ್ದಾರೆ. ಭಾರತ, ಮೋದಿ ಎಂದರೆ ಅನೇಕ ರಾಜ್ಯದ ಗಣ್ಯರಿಗೆ ಅಪಾರ ಗೌರವ.

ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆಯುತ್ತಿದ್ದ ಕಾರಣ ಜಪಾನ್ ಮತ್ತು ಭಾರತದ ಸಂಬಂಧ ಗಟ್ಟಿಯಾಗುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುತ್ತಿದೆ ಜಪಾನ್. ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ $ 5-ಟ್ರಿಲಿಯನ್ ಅಥವಾ ರೂ 3,20,000-ಕೋಟಿ ಹೂಡಿಕೆ ಗುರಿಯನ್ನು ಘೋಷಿಸಿದೆ.


Ad Widget

Ad Widget

Ad Widget

ಜಪಾನ್ ಪ್ರಧಾನಿಯವರು ತಮ್ಮ ಎರಡು ದಿನಗಳ ಭೇಟಿಗಾಗಿ ಮಾರ್ಚ್ 19 ರಂದು ಭಾರತಕ್ಕೆ ಆಗಮಿಸಿದ್ದರು. ಭಾರತಕ್ಕೆ ಭೇಟಿ (Official Visit) ನೀಡಿರುವ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆ ನೀಡಿದ್ದಾರೆ.

ಶುದ್ಧ ಶ್ರೀಗಂಧದ ಮರದಿಂದ ಮಾಡಿದ ‘ಕೃಷ್ಣ ಪಂಖಿ’ ಕಲಾಕೃತಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಕಲಾಕೃತಿಯನ್ನು ಸಾಂಪ್ರದಾಯಿಕ ಉಪಕರಣಗಳೊಂದಿಗೆ ತಯಾರಿಸಲಾಗಿದ್ದು, ಕಲಾಕೃತಿಯ ಮೇಲ್ಭಾಗದಲ್ಲಿ ನವಿಲಿನ ಚಿತ್ರವಿದೆ. ಕಲಾಕೃತಿಯು ಕೃಷ್ಣನ ವಿವಿಧ ಭಂಗಿಗಳನ್ನು ಹೊಂದಿದೆ. ಭಾರತದ ರಾಷ್ಟ್ರೀಯ ಪಕ್ಷಿಯಾದ ಮೇಲ್ಭಾಗದಲ್ಲಿ ಕೈಯಿಂದ ಕೆತ್ತಿದ ನವಿಲು ಆಕೃತಿಯನ್ನು ಹೊಂದಿದೆ. 

Leave a Reply

error: Content is protected !!
Scroll to Top
%d bloggers like this: