ಹೋಳಿಯ ದಿನ ಬೊಂಡದಲ್ಲಿ ಮದ್ಯ ಮಿಕ್ಸ್ !! | ಸೆಲೆಬ್ರಿಟಿ ಯುವ ನಟಿಯ ದುರಂತ ಅಂತ್ಯದ ಹಿಂದಿನ ಕಾರಣ ಬಯಲು

ತೆಲುಗು ಸಿನಿಮಾ ನಟಿ ಹಾಗೂ ಇಂಟರ್ನೆಟ್ ಸೆಲೆಬ್ರಿಟಿ ಡಾಲಿ ಡಿಕ್ರೂಜ್ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದು, ಇದೀಗ ಅವರ ಸಾವಿನ ಹಿಂದಿರುವ ಕಾರಣ ಹೊರಬಿದ್ದಿದೆ.

ಹೋಳಿ ಹಬ್ಬ ಆಚರಿಸಿ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ರಾಥೋಡ್ ಮತ್ತು ಇನ್ನೊಬ್ಬ ಮಹಿಳೆ ಕೂಡ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅನೇಕ ಸಂಗತಿಗಳು ತಿಳಿದುಬಂದಿದೆ. ಮಾರ್ಚ್ 18 ರ ಹೋಳಿ ಹಬ್ಬದಂದು ರೋಹಿತ್, ಗಾಯತ್ರಿ ಮನೆಗೆ ತೆರಳಿ ಆಕೆಯನ್ನು ಪ್ರಿಸ್ಟ್ ಪಬ್‌ಗೆ ಕರೆದೊಯ್ದ. ಇಬ್ಬರು ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ.

ಅಪಘಾತಕ್ಕೂ ಮುನ್ನ ಪಬ್‌ನಲ್ಲಿದ್ದ ಯುವಕರು ಎಳೆನೀರಿನಲ್ಲಿ ಮದ್ಯ ಮಿಶ್ರಣ ಮಾಡಿ ಗಾಯತ್ರಿ ಮತ್ತು ರೋಹಿತ್‌ಗೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಹೋಳಿ ಹಬ್ಬದ ಹಿಂದಿನ ದಿನವೇ ಯುವಕರು ಮದ್ಯ ಖರೀದಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಹೋಳಿ ಹಬ್ಬದಂದು ಮದ್ಯ ಸೇವನೆಗೆ ಅನುಮತಿ ಇಲ್ಲ. ಹೀಗಾಗಿ ಎಳನೀರಿನಲ್ಲಿ ಮಿಶ್ರಣ ಮಾಡಿದ್ದರು. ಇದೇ ಕಾರಣದಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.

ಗಾಯತ್ರಿ ಅವರು ಹಲವಾರು ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯನ್ನು ಮಾಡಿದ್ದಾರೆ. ‘ಜಾ ರಾಯುಡು’ ಎಂಬ ಯೂಟ್ಯೂಬ್ ಚಾನೆಲ್‌ನೊಂದಿಗೆ ಗಾಯತ್ರಿ ತಮ್ಮ ಮನಮೋಹಕ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದರು.

Leave A Reply