ನೀವೂ ಕೂಡ ಆಗಾಗ್ಗೆ ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸ ಹೊಂದಿದ್ದೀರಾ !?? | ಹಾಗಿದ್ರೆ ಇದರಿಂದ ಆರೋಗ್ಯಕ್ಕಾಗುವ ಪರಿಣಾಮ ಏನೆಂದು ತಿಳಿದುಕೊಳ್ಳಿ

ಬೇಸಿಗೆಯ ಧಗೆಗೆ ತಣ್ಣನೆಯಾಗಲು ಸಾಮನ್ಯವಾಗಿ ಎಲ್ಲರೂ ಬಳಸೋದು ತಂಪು ಪಾನೀಯ.ಇಂದು ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುವ ಕಾರಣ ಎಲ್ಲರೂ ಕೋಲ್ಡ್ ವಾಟರ್ ಅನ್ನೇ ಬಳಸೋರು ಜಾಸ್ತಿ. ಈ ತಣ್ಣಗಿನ ನೀರು ದೇಹವನ್ನು ತಂಪಾಗಿಸಿ ಆರಾಮದಾಯಕ ಅನುಭವ ನೀಡುತ್ತದೆ. ಆದ್ರೆ ಆರೋಗ್ಯ!!

ಹೌದು. ಈ ಕೋಲ್ಡ್ ವಾಟರ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ.ಯಾವ್ಯಾವ ರೀತಿಲಿ ಆರೋಗ್ಯಕ್ಕೆ ಹಾನಿ ಎಂಬುದು ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಫ್ರಿಡ್ಜ್ ನೀರು ಎಲ್ಲರಿಗೂ ಒಳ್ಳೆಯದಲ್ಲ, ವಿಶೇಷವಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಅಪಾಯದ ಅಂಶವಾಗಿದೆ. ರೋಗನಿರೋಧಕ ಶಕ್ತಿ ಉತ್ತಮವಾಗಿರುವವರಿಗೆ ಇದು ಸಮಸ್ಯೆಯಲ್ಲ, ಆದರೆ ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರಿಗೆ ಇದು ದೊಡ್ಡ ಸಮಸ್ಯೆಯಾಗಬಹುದು. ತಣ್ಣೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಗಂಟಲು ನೋವು, ಕೆಮ್ಮು ಅಥವಾ ಯಾವುದೇ ರೀತಿಯ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಫ್ರಿಡ್ಜ್‌ನಲ್ಲಿರುವ ತಣ್ಣೀರಿನಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ.

ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಜನರು ತಮ್ಮ ಕೋಣೆಯ ಉಷ್ಣಾಂಶಕ್ಕೆ ಸಮಾನವಾದ ನೀರನ್ನು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಬೆಚ್ಚಗಿನ ಅಥವಾ ಉಗುರುಬೆಚ್ಚನೆಯ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಬೇಸಿಗೆಯಲ್ಲಿ ಅಂತಹ ನೀರನ್ನು ಕುಡಿಯಲು ಸಾಧ್ಯವಾಗದಿದ್ದರೆ, ನಿಮ್ಮ ಕೋಣೆಯ ಉಷ್ಣಾಂಶಕ್ಕೆ ಸಮಾನವಾದ ನೀರನ್ನು ಕುಡಿಯಬೇಕು. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾಗುವುದೂ ತಪ್ಪುತ್ತದೆ. ಇದಕ್ಕಾಗಿ ನೀವು ಮಡಕೆ ನೀರನ್ನು ಬಳಸಬಹುದು.

ಫ್ರಿಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಗಂಟಲು ನೋವು,ಗಂಟಲಿನ ಸೋಂಕು,ಕೆಮ್ಮು-ಜ್ವರ,ತಲೆನೋವು,ಮಲಬದ್ಧತೆ ಸಮಸ್ಯೆ,ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಮಸ್ಯೆ ಉಂಟಾಗುತ್ತದೆ.

ಬಿಸಿನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂಬುದು ನಿಜ. ಅದೇ ಸಮಯದಲ್ಲಿ, ನಾವು ತಣ್ಣೀರನ್ನು ಬಳಸಿದಾಗ, ನಮ್ಮ ದೇಹವು ದುರ್ಬಲಗೊಳ್ಳುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಬಿಸಿನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ, ಉದಾಹರಣೆಗೆ ಗಂಟಲು ಮತ್ತು ಮೂಗಿಗೆ ಸಂಬಂಧಿಸಿದ ಅನೇಕ ರೀತಿಯ ಸೋಂಕುಗಳನ್ನು ಇದು ತೊಡೆದುಹಾಕುತ್ತದೆ. ಹಾಗಾಗಿ ವೈದ್ಯರು ಸಾಮಾನ್ಯ ದಿನಗಳಲ್ಲಿ ಬಿಸಿ ನೀರು ಕುಡಿಯಲು ಸಲಹೆ ನೀಡುತ್ತಾರೆ.

Leave A Reply

Your email address will not be published.