ಇಡೀ ವಿಶ್ವದಲ್ಲೇ ಅತ್ಯಂತ ‘ಜನಪ್ರಿಯ ನಾಯಕ’ರಾಗಿ ಹೊರ ಹೊಮ್ಮಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಿ|ಸರ್ವೇಯಲ್ಲಿ ಶೇ.77ರಷ್ಟು ಅಪ್ರೂವಲ್ ಪಡೆದುಕೊಂಡು ಮೊದಲ ಸ್ಥಾನದಲ್ಲಿರುವ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಮತ್ತೆ ಉತ್ತಮ ನಾಯಕರೆಂದು ಸಾಬೀತು ಪಡಿಸುತ್ತಲೇ ಇದ್ದು, ಇದೀಗ ಮಗದೊಮ್ಮೆ ವಿಶ್ವದಲ್ಲೇ ಅತ್ಯಂತ ವಿಶ್ವಾಸಾರ್ಹ ಹಾಗೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಅಮೆರಿಕ ಮೂಲದ ಗ್ಲೋಬಲ್ ಡಿಸಿಜನ್ ಇಂಟಲಿಜೆನ್ಸ್ ಕಂಪೆನಿಯಾಗಿರೋ ಮಾರ್ನಿಂಗ್ ಕನ್ಸಲ್ಟ್ ಅನ್ನೋ ಸಂಸ್ಥೆ ವಿಶ್ವಾದ್ಯಂತ ಸರ್ವೆಯನ್ನು ನಡೆಸಿದ್ದು,ಕಳೆದ 8 ವರ್ಷಗಳಿಂದ ಈ ಸಂಸ್ಥೆ ಸರ್ವೇ ನಡೆಸುತ್ತಾ ಬಂದಿದೆ.ಸಂಸ್ಥೆ ಬಿಡುಗಡೆ ಮಾಡಿರೋ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್ ಪ್ರಕಾರ ಶೇ.77ರಷ್ಟು ಅಪ್ರೂವಲ್ ಪಡೆದುಕೊಳ್ಳುವುದರ ಮೂಲಕ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿ ಇದ್ದಾರೆ.

ಹೆಮ್ಮೆಯ ಮೋದಿ ಮೊದಲ ಸ್ಥಾನ ಅಲಂಕರಿಸಿಸಿಕೊಂಡರೆ,ಮೆಕ್ಸಿಕೋದ ಲೋಪೇಜ್ ಒಬ್ರಾಡರ್ ಶೇ.63ರಷ್ಟು ಅಪ್ರೂವಲ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಶೇ.54ರಷ್ಟು ಅಪ್ರೂವಲ್​ನೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದಾರೆ. ಈ ಮೂವರನ್ನೂ ಹೊರತು ಪಡಿಸಿ ಕೆನಡಾ, ಅಮೆರಿಕಾ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ಎಲ್ಲ ರಾಷ್ಟ್ರಗಳ ಮುಖ್ಯಸ್ಥರೂ ಶೇ.50ಕ್ಕಿಂತ ಕಡಿಮೆ ಅಪ್ರೂವಲ್ ಪಡೆದು ಜನಪ್ರಿಯತೆ ಕಳೆದುಕೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ 7ನೇ ಸ್ಥಾನಕ್ಕೆ ಕುಸಿದಿದ್ದರೆ, ಇಂಗ್ಲೆಂಡ್​ ಪ್ರಧಾನಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್​ ಸಂಸ್ಥೆ ಬಿಡುಗಡೆ ಮಾಡಿರೋ ಸರ್ವೇ ಪ್ರಕಾರ, ಪ್ಲಸ್ 60 ಅಪ್ರೂವಲ್ ರೇಟಿಂಗ್ ಹೊಂದಿರೋ ವಿಶ್ವದ ಏಕೈಕ ನಾಯಕರಾಗಿ ಕೂಡ ಪ್ರಧಾನಮಂತ್ರಿ ನರೇಂದ್ರ ಹೊರಹೊಮ್ಮಿದ್ದಾರೆ. ಅವರನ್ನು ಹೊರತು ಪಡಿಸಿದ್ರೆ ಪ್ಲಸ್ 14 ರೇಟಿಂಗ್ಸ್ ಅನ್ನು ಇಟಲಿ ಪ್ರಧಾನಿ ಹೊಂದಿದ್ದರೆ, ಪ್ಲಸ್​-2 ರೇಟಿಂಗ್​ ಅನ್ನು ಜಪಾನ್ ಪ್ರಧಾನಿ ಹೊಂದಿದ್ದಾರೆ. ಉಳಿದಂತೆ ವಿಶ್ವದ ಎಲ್ಲ ನಾಯಕರೂ ನೆಗೆಟಿವ್ ಅಪ್ರೂವಲ್ ರೇಟಿಂಗ್ ಹೊಂದಿದ್ದು, ಅವರವರ ದೇಶದ ಜನ ಆ ನಾಯಕರ ಮೇಲೆ ವಿಶ್ವಾಸ ಕಳೆದುಕೊಂಡಿರೋದನ್ನ ತೋರಿಸುತ್ತಿದೆ ಅಂತಾ ಸರ್ವೇ ಹೇಳಿದೆ.

ಯಾವ ದೇಶದ ಮುಖ್ಯಸ್ಥರು ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಭಾರತ -ಪ್ರಧಾನಿ ಮೋದಿ -ಶೇ.77
ಮೆಕ್ಸಿಕೋ– ಅಧ್ಯಕ್ಷ ಲೋಪೇಜ್ ಒಬ್ರಾಡರ್ -ಶೇ.63
ಇಟಲಿ – ಪ್ರಧಾನಿ ಮಾರಿಯೋ ಡ್ರಾಘಿ -ಶೇ.54
ಜರ್ಮನಿ– ಚಾನ್ಸಲರ್ ಸ್ಕಾಲ್ಜ್ -ಶೇ.45
ಜಪಾನ್ –ಫ್ಯೂಮಿಯೋ ಕಿಶಿದಾ -ಶೇ.42
ಕೆನಡಾ -ಪ್ರಧಾನಿ ಜಸ್ಟಿನ್ ಟ್ರಡ್ಯೂ -ಶೇ.42
ಅಮೆರಿಕಾ -ಅಧ್ಯಕ್ಷ ಜೋ ಬೈಡನ್ -ಶೇ.41
ಫ್ರಾನ್ಸ್ -ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ -ಶೇ.41
ಆಸ್ಟ್ರೇಲಿಯಾ -ಪ್ರಧಾನಿ ಮಾರಿಸನ್ -ಶೇ.41
ದಕ್ಷಿಣ ಕೋರಿಯಾ -ಅಧ್ಯಕ್ಷ ಮೂನ್ ಜೇ-ಇನ್ -ಶೇ.40
ಬ್ರೆಝಿಲ್ -ಅಧ್ಯಕ್ಷ ಬೊಲ್ಸೊನಾರೋ -ಶೇ.39
ಸ್ಪೇನ್ -ಪ್ರಧಾನಿ ಪೆಡ್ರೋ ಸಾಂಜೆಝ್ -ಶೇ.38
ಇಂಗ್ಲೆಂಡ್ -ಪ್ರಧಾನಿ ಬೋರಿಸ್ ಜಾನ್ಸನ್ -ಶೇ.33

Leave A Reply

Your email address will not be published.