ಉಡುಪಿ: ಕಾಪುವಿನ ‘ಸುಗ್ಗಿ ಮಾರಿಪೂಜೆ’ ಉತ್ಸವಕ್ಕೆ ಅಂಗಡಿ ತೆರೆಯಲು ಮುಸ್ಲಿಮರಿಗಿಲ್ಲ ಅವಕಾಶ !! | ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದ ಹಿಂದೂ ಕಾರ್ಯಕರ್ತರು

0 8

ಉಡುಪಿ :ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ ‘ಸುಗ್ಗಿ ಮಾರಿ ಪೂಜೆ’ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಡಿ ಎಂದು ಹಿಂದೂ ಕಾರ್ಯಕರ್ತರು ಕಾಪು ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.

ಮಾರ್ಚ್ 22 ಮತ್ತು ಮಾರ್ಚ್ 23 ರಂದು ನಡೆಯಲಿರುವ ಈ ಕಾರ್ಯಕ್ರಮದ ಉತ್ಸವದಂದು ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿ ಮುಚ್ಚಬೇಕು.ಒಂದು ವೇಳೆ ಅಂಗಡಿ ತೆರೆಯಲು ಅವಕಾಶ ನೀಡಿದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಪತ್ರದಲ್ಲಿ ಅಧಿಕಾರಿಗೆ ಬೆದರಿಕೆ ಹಾಕಲಾಗಿದೆ.

ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಅಧಿಕಾರಿ ವೆಂಕಟೇಶ ನಾವಡ ‘ಮುಸ್ಲಿಮರ ಅಂಗಡಿ/ಮುಂಗಟ್ಟು ತೆರೆಯಲು ಅವಕಾಶ ನೀಡಬೇಡಿ ಎಂದು ನಮಗೆ ಪತ್ರ ಬಂದಿದೆ. ಆದರೆ ಭಾರತ ಜಾತ್ಯತೀತ ದೇಶವಾಗಿರುವುದರಿಂದ ಎಲ್ಲಾ ಸಮುದಾಯಗಳ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯಬಹುದು.ನಾವು ಇನ್ನೂ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

Leave A Reply