ಭೀಕರ ಅಪಘಾತದಲ್ಲಿ ಇಂಟರ್ನೆಟ್ ಸೆಲೆಬ್ರಿಟಿ ನಟಿ ದಾರುಣ ಸಾವು | ಕಂಬನಿ ಮಿಡಿದ ಚಿತ್ರರಂಗ!

ತೆಲುಗು ಸಿನಿಮಾ ನಟಿ ಹಾಗೂ ಇಂಟರ್ನೆಟ್ ಸೆಲೆಬ್ರಿಟಿ ಡಾಲಿ ಡಿಕ್ರೂಜ್ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.

ಡಾಲಿ ಡಿಕ್ರೂಜ್ ಅವರು ಗಾಯತ್ರಿ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದರು‌.

ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ರಾಥೋಡ್ ಎಂಬ ವ್ಯಕ್ತಿ ಮತ್ತು ಇನ್ನೊಬ್ಬ ಮಹಿಳೆ ಕೂಡ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಗಾಯತ್ರಿ ಅವರು ಹಲವಾರು ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯನ್ನು ಮಾಡಿದ್ದಾರೆ. ‘ಜಾ ರಾಯುಡು’ ಎಂಬ ಯೂಟ್ಯೂಬ್ ಚಾನೆಲ್‌ನೊಂದಿಗೆ ಗಾಯತ್ರಿ ತಮ್ಮ ಮನಮೋಹಕ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದರು.

Leave A Reply

Your email address will not be published.