ಭಾರತದ ಅಳಿಯನಾದ ಆಸಿಸ್ ಆಲ್‌ರೌಂಡರ್ ಮ್ಯಾಕ್ಸಿ !! | ಭಾರತೀಯ ಮೂಲದ ಗರ್ಲ್‌ಫ್ರೆಂಡ್ ವಿನಿ ರಾಮನ್ ರನ್ನು ಮದುವೆಯಾದ ಆರ್‌ಸಿಬಿ ಆಟಗಾರ

ಆಸ್ಟ್ರೇಲಿಯಾದ ಆಲ್‌ರೌಂಡರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಭಾರತದ ಅಳಿಯನಾಗಿದ್ದಾರೆ. ಹೌದು. ಮ್ಯಾಕ್ಸಿ ಭಾರತೀಯ ಮೂಲದ ಗರ್ಲ್‌ಫ್ರೆಂಡ್ ವಿನಿ ರಾಮನ್ ರೊಂದಿಗೆ ಶುಕ್ರವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆ ಆಗಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮ್ಯಾಕ್ಸ್‌ವೆಲ್ ಮದುವೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ದಂಪತಿ ಪರಸ್ಪರ ಕೈಹಿಡಿದು ರಿಂಗ್‌ಗಳನ್ನು ಪ್ರದರ್ಶಿಸಿದ್ದಾರೆ. ವಿನಿ ಎಂಬುದು ಪರಿಪೂರ್ಣತೆಯ ಹುಡುಕಾಟ ಮತ್ತು ನಿನ್ನ ಜೊತೆ ನಾನು ಪರಿಪೂರ್ಣ ಎಂಬ ಭಾವ ವ್ಯಕ್ತವಾಗುತ್ತಿದೆ ಎಂದು ಬರೆದುಕೊಂಡಿರುವ ಮ್ಯಾಕ್ಸ್‌ವೆಲ್ 18/3/2022 ಮದುವೆ ದಿನಾಂಕವನ್ನು ಉಲ್ಲೇಖಿಸಿದ್ದಾರೆ.

https://www.instagram.com/p/CbRZdServhU/?utm_source=ig_web_copy_link

ಇದಲ್ಲದೆ, ದಂಪತಿ ಇನ್ನೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಇಬ್ಬರು ತುಟಿಗೆ ಚುಂಬಿಸುತ್ತಿರುವ ದೃಶ್ಯವಿದ್ದು, ಮಿಸ್ಟರ್ ಆ್ಯಂಡ್ ಮಿಸೆಸ್ ಮ್ಯಾಕ್ಸ್‌ವೆಲ್ ಎಂದು ಬರೆಯಲಾಗಿದೆ. ಗರ್ಲ್‌ಫ್ರೆಂಡ್ ವಿನಿ ರಾಮನ್‌ರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡು ಎರಡು ವರ್ಷಗಳೇ ಕಳೆದಿವೆ. ಆದರೆ, ಇಬ್ಬರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇತ್ತು. ಕೊನೆಗೂ ಉತ್ತರ ಸಿಕ್ಕಿದ್ದು, ಅಭಿಮಾನಿಗಳು ನೂತನ ದಂಪತಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ ಫೋಟೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಬಂದಿದೆ.

ಅಂದಹಾಗೆ ವಿನಿ ರಾಮನ್ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ ಮೆಂಟನ್ ಗರ್ಲ್ಸ್ ಸೆಕೆಂಡರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಮೆಲ್ಬೋರ್ನ್‌ನಲ್ಲಿ ಫಾರ್ಮಸಿಸ್ಟ್ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ವಿನಿ ರಾಮನ್ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದು, ವಿನಿ ಅಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.

ಇನ್ನು ಮ್ಯಾಕ್ಸ್‌ವೆಲ್ 2022ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದು, ಈ ಬಾರಿಯೂ ಅವರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಕಳೆದ ಬಾರಿ ಆರ್‌ಸಿಬಿ ತಂಡದಲ್ಲಿ ಮ್ಯಾಕ್ಸಿ ಉತ್ತಮ ಪ್ರದರ್ಶನ ನೀಡಿದ್ದರು.

Leave A Reply