ಮನೆ ಮುಂದೆ ಗೋಮಾಂಸದ ನೀರು | ಪ್ರಶ್ನಿಸಿದ್ದಕ್ಕೆ ಅಮಾಯಕನ ಕೊಲೆ!

ಗೋಮಾಂಸದ ರಕ್ತವನ್ನು ಮನೆ ಮುಂದೆ ಚೆಲ್ಲಬೇಡಿ ದುರ್ವಾಸನೆ ಬರುತ್ತೆ ಎಂದು ಹೇಳಿದ ಸಣ್ಣ ಮಾತಿಗೆ ಮಾತು ಬೆಳೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗೋ ಮಟ್ಟಕ್ಕೆ ಹೋಗಿರೋ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪಟ್ಟಣದಲ್ಲಿ ನಡೆದಿದೆ.

ಅಪ್ಸರ್ ಪಾಷಾ ( 32) ಮೃತಪಟ್ಟ ದುರ್ದೈವಿ.

ಹಾಜಿ ಖುರೇಷಿ ಕುಟುಂಬ ಹಾಗೂ ಕೊಲೆಯಾದ ಅಪ್ಸರ್ ಪಾಷಾ ಕುಟುಂಬದ ನಡುವೆ ನಡುವೆ ನಡೆದ ಈ ಜಗಳ ಕೊನೆಗೆ ಕೊಲೆಯಲ್ಲಿ ಮುಗಿದಿದೆ. ಹಾಜಿ ಖುರೇಷಿ ಕುಟುಂಬ ಗೋಮಾಂಸ ವ್ಯಾಪಾರ ಮಾಡುತ್ತಿದ್ದು, ಗೋವನ್ನು ಕಡಿದ ನಂತರ ಸ್ವಚ್ಛ ಮಾಡಿದ ಸ್ವಚ್ಛ ಮಾಡಿದ ನೀರನ್ನು ಚರಂಡಿಯಲ್ಲಿ ಬಿಡುತ್ತಿದ್ದರು. ಈ ನೀರು ಅಪ್ಸರ್ ಮನೆಯ ಮುಂದೆ ನಿಲ್ಲುತ್ತಿದ್ದ ಕಾರಣ ದುರ್ನಾತ ಬೀರುತ್ತಿತ್ತು. ಇದರಿಂದ ಅಪ್ಸರ್ ಮನೆ ಮಂದಿಗೆ ಕಿರಿಕಿರಿಯಾಗುತ್ತಿತ್ತು. ಹಾಗಾಗಿ ಜಗಳ ನಡೆಯುತ್ತಿತ್ತು.

ಇದಾದ ನಂತರ ಅಕ್ರಮ ಗೋ-ಮಾಂಸ ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಪೋಲಿಸರು ಎರಡು ಮೂರು ಬಾರಿ ಹಾಜಿ ಖುರೇಷಿರವರ ಅಂಗಡಿಯಿಂದ ಅಕ್ರಮ ಗೋ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ಇದಕ್ಕೆಲ್ಲಾ ಅಪ್ಸರ್ ಕುಟುಂಬವೇ ಕಾರಣ ಎಂದು ವಿನಾಕಾರಣ ಹಾಜಿ ಖುರೇಷಿ ಮತ್ತು ತಂಡ ಸುಮ್ಮನೆ ಜಗಳ ಮಾಡುತ್ತಿದ್ದರು.

ಆದರೆ ಗುರುವಾರ ಬೆಳಿಗ್ಗೆ ಅಪ್ಸರ್ ತಮ್ಮ ಇಮ್ರಾನ್ ಗೆ
ಈ ಕಾರಣಕ್ಕೆ ಸಂಬಂಧಿಸಿದಂತೆ ಆಜಾದ್ ರಸ್ತೆಯಲ್ಲಿ ಹಾಜಿ ಖುರೇಷಿ ಮತ್ತವರ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ.

ಇದರಿಂದ ಕೆಂಡಾಮಂಡಲನಾದ ಅಪ್ಸರ್ ಈ ವಿಚಾರ ಪ್ರಶ್ನಿಸಲು ಬಂದಿದ್ದು, ಯಾಕೆ ಹಲ್ಲೆ ಮಾಡಿದ್ದು ಎಂದು ವಿಚಾರಿಸಿದಾಗ ಈ ಸಂದರ್ಭದಲ್ಲಿ ಏಕಾಏಕಿ ಬಂದ ಹಾಜಿ ಖುರೇಷಿ ಗ್ಯಾಂಗ್ ಅಪ್ಸರ್ ಮೇಲೆ ಹಲ್ಲೆ ನಡೆಸಿದೆ. ಹಾಜಿ ಖುರೇಷಿ ಗ್ಯಾಂಗ್‌ನ ಏಸಾನ್ ಖುರೇಷಿ ಕೊಲೆ ಮಾಡುವ ಉದ್ದೇಶದಿಂದಲೇ ಹೊಸದೊಂದು ಚೂರಿ ತಂದಿದ್ದು, ಅದರಿಂದ ಅಪ್ಸರ್ ಪಾಷಾ ಹೊಟ್ಟೆಗೆ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.

ಕೂಡಲೇ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಅಪ್ಸರ್‌ನನ್ನು ಕ್ರಾಪರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಕೂಡ ಮತ್ತೆ ಅಪ್ಸರ್ ಹಾಗೂ ಹಾಜಿ ಖುರೇಷಿ ತಂಡದ ನಡುವೆ ಹೊಡೆದಾಟ ಶುರುವಾಗಿತ್ತು. ಇದರಿಂದಾಗಿ ಆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಇತ್ತ ಕಡೆ ಚೂರಿ ಇರಿತಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಪ್ಸರ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.

ಇನ್ನು ಸ್ಥಳಕ್ಕೆ ಎಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಮುಖ ಆರೋಪಿ ಏಷಾನ್ ಖುರೇಷಿಯನ್ನು ವಶಕ್ಕೆ ಪಡೆದು ಉಳಿದ 4 ಮಂದಿಗೆ ಬಲೆ ಬಿಸಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ಜನರನ್ನು ಆತಂಕಕ್ಕೆ ಗುರಿ ಮಾಡಿದೆ. ತಾಲೂಕು ಆಡಳಿತ ಹಾಗೂ ಪೋಲಿಸರು ಅಕ್ರಮ ಗೋ ಮಾಂಸ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ರೀತಿಯ ಘಟನೆ ನಡೆಯಲು ನೇರ ಕಾರಣವೇ ಇದಕ್ಕೆಲ್ಲ ಮೂಲ ಎಂದು ಕುಶಲನಗರ ಬಡಾವಣೆಯ ನಿವಾಸಿಗಳ ಆರೋಪ.

Leave A Reply

Your email address will not be published.