ಕಚೇರಿಗೆ ಹಾಸಿಗೆ, ದಿಂಬು ಸಮೇತ ಉದ್ಯೋಗಕ್ಕೆ ಹಾಜರಾದ ವ್ಯಕ್ತಿ!!

ಒಂದಿಷ್ಟು ನೆಮ್ಮದಿಯಿಂದ ಬದುಕಬೇಕಾದರೆ ಒಂದು ಒಳ್ಳೆಯ ಕೆಲಸ ಮುಖ್ಯ. ಯಾಕಂದ್ರೆ ಇಂದು ಮನಕ್ಕಿಂತ ಧನಕ್ಕೆ ಹೆಚ್ಚು ಬೆಲೆ.ದಿನೇ ದಿನೇ ಪ್ರತಿನಿತ್ಯ ಬಳಸೋ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳಿಗೂ ಬೆಲೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ಕೇವಲ ಉದ್ಯೋಗ ಇದ್ದು ಅದಿಕ್ಕೆ ತಕ್ಕಂತೆ ಸಂಬಳ ಇರದಿದ್ದರೆ ಏನು ಪ್ರಯೋಜನ ಅಲ್ವಾ..

ಅದೇ ರೀತಿ ಇಲ್ಲೊಬ್ಬ ಕಡಿಮೆ ಸಂಬಳ ನೀಡುತ್ತಿದ್ದ ಕಂಪನಿ ವಿರುದ್ಧ ಪ್ರತಿಭಟನೆಗೆ ನಿಂತಿದ್ದಾನೆ. ಕೇವಲ ಬಾಯಿ ಮಾತಿಗೆ ಬೆಲೆ ಎಂಬ ಮಾತನ್ನು ಕೇಳಿದ್ದೀವಿ. ಅದೇ ರೀತಿ ಈ ಬುದ್ದಿವಂತ ಎಷ್ಟು ಕೇಳಿದರು ಸಂಬಳ ಹೆಚ್ಚಿಸದ್ದಕ್ಕೆ ಒಳ್ಳೆಯ ಉಪಾಯವನ್ನೇ ಮಾಡಿದ್ದಾನೆ. ಹೌದು. ಈತ ಕೆಲಸ ಮಾಡುವ ಸಂಸ್ಥೆ ವಿರುದ್ಧ ಪ್ರತಿಭಟಿಸಲು, ಕಚೇರಿಗೆ ಹಾಸಿಗೆ, ದಿಂಬು ಹಿಡಿದು ಬಂದಿದ್ದಾನೆ.

ವ್ಯಕ್ತಿ ಹಾಸಿಗೆ ದಿಂಬು ಸಹಿತ ಬಂದಿರೋ ಬಗ್ಗೆ ಮಾತನಾಡಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ತಾನು ಯಾಕೆ ಹೀಗೆ ಮಾಡಿದೆ ಎಂಬುದನ್ನು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ವ್ಯಕ್ತಿ ತನ್ನ ಹೆಸರು ಸೈಮನ್ ಎಂದು ಹೇಳಿಕೊಂಡಿದ್ದಾನೆ.

ಟಿಕ್‌ ಟಾಕ್ ನಲ್ಲಿ ತನ್ನ ವೀಡಿಯೊವನ್ನು ಅಪ್‌ ಲೋಡ್ ಮಾಡಿರುವ ಸೈಮನ್ ಕಡಿಮೆ ಸಂಬಳದ ಬಗ್ಗೆ ಮಾತನಾಡಿದ್ದು,ವೀಡಿಯೊದಲ್ಲಿ ಸೈಮನ್ ತನ್ನ ಅಗತ್ಯ ವಸ್ತುಗಳು ಮತ್ತು ಹಾಸಿಗೆಯೊಂದಿಗೆ ಕಚೇರಿಯ ಕ್ಯುಬಿಕಲ್‌ ಗೆ ಶಿಫ್ಟ್ ಆಗುತ್ತಿರೋದನ್ನು ಕಾಣಬಹುದು.ಕಚೇರಿಯಿಂದ ಮನೆ ಬಾಡಿಗೆ ಕೊಡುವಷ್ಟು ಸಂಬಳ ಸಿಗದ ಕಾರಣ ಎಲ್ಲ ಸಾಮಾನುಗಳೊಂದಿಗೆ ಇಲ್ಲಿ ವಾಸಕ್ಕೆ ಬಂದಿದ್ದೇನೆ. ಈಗ ಕಂಪನಿಯ ಬಹುತೇಕ ಸಹೋದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಕಚೇರಿಗೆ ಬರುವುದಿಲ್ಲ. ಆದ್ದರಿಂದ ತನಗೆ ವಾಸಿಸಲು ಇಲ್ಲಿ ಸಾಕಷ್ಟು ಸ್ಥಳ ಇದೆ ಎಂದು ಸೈಮನ್ ಹೇಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಇನ್ನೂ ಸೈಮನ್ ಪ್ರತಿಭಟನೆಯ ವಿಡಿಯೋಗಳನ್ನು ಲಕ್ಷಾಂತರ ಜನರು ನೋಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತ ಸೈಮನ್ ಸಹ ಪ್ರತಿದಿನ ಕಚೇರಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ವಿಡಿಯೋ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ.ಈ ವಿಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೈಮನ್, ಫಾಲೋವರ್ಸ್ ಗಳ ಸಂಖ್ಯೆ ಸಹ ಹೆಚ್ಚಳವಾಗಿದ್ದು,ವಿಡಿಯೋ ನೋಡಿದ ಫಾಲೋವರ್ಸ್​ ಗಳು ನಿಮಗೆ ಸರಿಯಾಗಿ ಊಟ ಸಿಗುತ್ತಿದೆಯಾ ಅಥವಾ ನಾವು ನಿಮಗೆ ಆ ವ್ಯವಸ್ಥೆ ಕಲ್ಪಿಸಬೇಕಾ ಎಂದು ಕೇಳಿಕೊಂಡಿದ್ದಾರೆ.

ಸೈಮನ್ ನನ್ನು ಸಂಪರ್ಕಿಸುವ ಕಚೇರಿಯ ಅಧಿಕಾರಿಗಳು, ಸೋಶಿಯಲ್ ಮೀಡಿಯಾದಿಂದ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಹೇಳಿದ್ದಾರೆ ಎನ್ನಲಾಗಿದ್ದು,ಕಂಪನಿಯ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚನೆಯನ್ನ ಸೈಮನ್ ಗೆ ನೀಡಲಾಗಿದೆ ಎಂದು ವರದಿಯಾಗಿದೆ.ಈ ಪ್ರತಿಭಟನೆ ಬಳಿಕ ಸೈಮನ್ ಸಂಬಳ ಹೆಚ್ಚಾಯ್ತಾ ಅಥವಾ ಆತನನ್ನು ಕೆಲಸದಿಂದ ವಜಾ ಮಾಡಲಾಯ್ತಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಒಂದು ಮಾಹಿತಿಯ ಪ್ರಕಾರ ಕಚೇರಿಯಲ್ಲಿ ತಾತ್ಕಾಲಿಕ ಮನೆ ಮಾಡಿಕೊಂಡ ನಾಲ್ಕೇ ದಿನಕ್ಕೆ ಅವರು ಆತನನ್ನು ಹೊರಹಾಕಲ್ಪಟ್ಟಿದ್ದಾಗಿ ತಿಳಿದು ಬಂದಿದೆ.

Leave A Reply

Your email address will not be published.