ಇದು ‘ಮೌನಿಕಾ’ರ ವಿಸ್ಮಯ ಕತೆ|ಮೂವರಿಗೆ ಅದೇ ಹೆಸರು.. ಅದೇ ಶಾಲೆ,ಒಂದೇ ಕಚೇರಿಯಲ್ಲಿ ಕೆಲಸ|ಕೆಲವರಿಗೆ ವಿಚಿತ್ರ,ಕೆಲವರಿಗೆ ಕುತೂಹಲ,ಇನ್ನೂ ಕೆಲವರಿಗೆ ಕನ್ಫ್ಯೂಸ್!

0 4

ಒಬ್ಬರ ಹಾಗೇ ಏಳು ಜನ ಇರುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ಸಾಮಾನ್ಯವಾಗಿ ಒಂದೇ ಹೆಸರು ಹಲವು ಜನರಿಗೆ ಇರುವುದನ್ನು ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ವಿಸ್ಮಯವೆಂಬಂತೆ ಒಂದೇ ಹೆಸರಿನ ಮೂವರು ಮಹಿಳೆಯರು ಒಂದೇ ಶಾಲೆಯಿಂದ ಹಿಡಿದು ಇದೀಗ ಒಂದೇ ಉದ್ಯೋಗದ ಒಂದೇ ಇಲಾಖೆಯಲ್ಲಿ ಕೆಲಸಮಾಡುತ್ತಿರುವ ಅಚ್ಚರಿಯ ಸಂಗತಿ ತಿಳಿದುಬಂದಿದೆ.

ಹೌದು.ಇದು ‘ಮೌನಿಕಾ’ರ ಕತೆ.ಈ ಮೂವರೇ ಮೋರೆ ಮೌನಿಕಾ, ಸಿಬ್ಬುಲ ಮೌನಿಕಾ, ಕುಂಟಾ ಮೌನಿಕಾ. ನೀವೇ ನೋಡಿದ ಹಾಗೆ ಮನೆ ಹೆಸರು ಒಂದು ಬದಲಿದೆ ಬಿಟ್ಟರೆ ಅವರ ಹೆಸರು ಮಾತ್ರ ಒಂದೇ.ಈ ಮೂವರು ಯುವತಿಯರು ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿಯವರಾಗಿದ್ದು ಇಂಥದ್ದೊಂದು ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.

ಇವರೆಲ್ಲ ಒಂದೇ ಶಾಲೆಯಲ್ಲಿ ಓದಿ, ಈಗ ಸಹದ್ಯೋಗಿಗಳಾಗಿ ಕೆಲಸ ಮಾಡುತ್ತಿರುವುದು ಅಚ್ಚರಿಯೇ ಸರಿ.ಈ ಮೂವರು ನಿರ್ಮಲ್ ಜಿಲ್ಲೆಯ ಲೋಕೇಶ್ವರ ಮಂಡಲದಲ್ಲಿ ಕಂಡು ಬರುವ ಹಡ್ಗಾಂ, ಲೋಕೇಶ್ವರಂ ಮತ್ತು ರಾಜೂರ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. ಮೂವರೂ ಲೋಕೇಶ್ವರದ ಶಾರದಾ ವಿದ್ಯಾಮಂದಿರದಲ್ಲಿ 10ನೇ ತರಗತಿವರೆಗೆ ಓದಿದ್ದಾರೆ.ನಂತರ ಅವರು 2014ರಲ್ಲಿ ತಮ್ಮ ಕೃಷಿ ಡಿಪ್ಲೊಮಾ ಪೂರ್ಣಗೊಳಿಸಿದರು. 2017ರಲ್ಲಿ ಈ ಮೂವರೂ ವಲಯ ಕೃಷಿ ವಿಸ್ತರಣಾ ಅಧಿಕಾರಿಗಳ (ಎಇಒ) ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈಗ ಅವರು ಲೋಕೇಶ್ವರದಲ್ಲಿ ಮಂಡಲದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೂವರೂ ಒಂದೇ ಶಾಲೆಯಲ್ಲಿ ಓದಿದ್ದೇವೆ. ಈಗ ಅದೇ ಶಾಲೆಯ ಪಕ್ಕದಲ್ಲೇ ಕಚೇರಿ ಇದೆ. ಆಗಾಗ ಶಿಕ್ಷಕರು ಬಂದು ನಮಗೆ ಇನ್ನಷ್ಟು ಸ್ಫೂರ್ತಿ ನೀಡುತ್ತಾರೆ. ಮೂವರು ಶಾಲೆ ಕಡೆಗೆ ಹೋದಾಗ ಅವರೂ ಖುಷಿಪಡುತ್ತಾರೆ. ನಮಗೆ ತುಂಬಾ ಸಂತೋಷವಾಗಿದೆ. ಇದೆಲ್ಲವೂ ಆಕಸ್ಮಿಕವಾಗಿ ನಡೆದಿದೆ ಎಂದು ಆ ಮೂವರು ‘ಮೌನಿಕಾ’ರು ಹೇಳುವ ಮಾತು.

ಅಂತೂ ಕಚೇರಿಗೆ ನೇಮಕವಾದ ಮೂವರ ಹೆಸರು ಒಂದೇ ಆಗಿರುವುದನ್ನು ಕಂಡು ಕೆಲವರು ಅಚ್ಚರಿಗೊಂಡಿದ್ದಾರೆ. ಅದೇ ಹೆಸರು.. ಅದೇ ಶಾಲೆ, ಅದೇ ಮಂಡಲ.. ಒಂದೇ ಕಚೇರಿಯಲ್ಲಿ ಕೆಲಸ. ಕೆಲವರಿಗೆ ವಿಚಿತ್ರ. ಕೆಲವರಿಗೆ ಕುತೂಹಲ. ಇನ್ನೂ ಕೆಲವರಿಗೆ ಕನ್ಫ್ಯೂಸ್.ಒಟ್ಟಾರೆ ಇವರ ಸ್ಟೋರಿ ಮಾತ್ರ ಇಂಟೆರೆಸ್ಟಿಂಗ್..

Leave A Reply