ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣವಂತೆ ಈ ಎಲೆ !! | ಇಲ್ಲಿದೆ ಈ ಔಷಧೀಯ ಎಲೆಯ ಕುರಿತು ಮಾಹಿತಿ

ಇಂದಿನ ಜೀವನಶೈಲಿಯಲ್ಲಿ ನಮ್ಮನ್ನು ನಾವು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಮಧುಮೇಹ, ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ. ಆದರೆ ಈ ಕಾಯಿಲೆಗಳಿಗೆಲ್ಲ ಬಿಲ್ವಪತ್ರೆ ಎಲೆ ರಾಮಬಾಣವಿದ್ದಂತೆ.

ಈ ಆರೋಗ್ಯ ಸಮಸ್ಯೆಗಳು ನಿಮಗಿದ್ದಲ್ಲಿ, ಬಿಲ್ವ ಪತ್ರೆ ತಿನ್ನುವ ಮೂಲಕ ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು. ಬಿಲ್ವ ಪತ್ರೆ ಶಿವನಿಗೆ ತುಂಬಾ ಪ್ರಿಯವಾದುದು. ಹಾಗಾಗಿ ಶಿವನ ಪ್ರತಿ ಪೂಜೆಯಲ್ಲಿಯೂ ಬಿಲ್ವ ಪತ್ರೆಯನ್ನು ಅರ್ಪಿಸಲಾಗುತ್ತದೆ.

ಬಿಲ್ವ ಪತ್ರೆ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದನ್ನು ತಿನ್ನುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಬಿಲ್ವ ಪತ್ರೆ ಆ್ಯಂಟಿ ಒಕ್ಸಿಡೆಂಟ್ ಗುಣಗಳಿಂದ ಕೂಡಿದೆ. ಮಾತ್ರವಲ್ಲ ಇದರಲ್ಲಿ ಪೌಷ್ಟಿಕಾಂಶಗಳು ಕೂಡಾ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರೈಬೋಫ್ಲೋಬಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಬಿ1, ಬಿ6, ಬಿ12 ಹೇರಳವಾಗಿದೆ.

ಮಧುಮೇಹಿಗಳಿಗೆ ಬಿಲ್ವ ಪತ್ರೆ ರಾಮಬಾಣವಿದ್ದಂತೆ. ಅಧಿಕ ಕೊಲೆಸ್ಟ್ರಾಲ್ ಇರುವವರು ಕೂಡ ನಿಯಮಿತವಾಗಿ ಈ ಎಲೆಯನ್ನು ಸೇವಿಸಬಹುದು. ಮಲಬದ್ಧತೆಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿವೆ. ಮಲಬದ್ಧತೆಯ ಸಮಸ್ಯೆಯಲ್ಲಿ, ಬಿಲ್ವ ಪತ್ರೆಯನ್ನು ಉಪ್ಪು ಮತ್ತು ಕರಿಮೆಣಸಿನೊಂದಿಗೆ ಸೇವಿಸಬಹುದು. ಹೀಗೆ ಮಾಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಹೊಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿಯೂ ಈ ಎಲೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಲ್ಯಾಕ್ಟೆಸಿವ್ ಪ್ರಾಪರ್ಟಿಯನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬಿಲ್ವ ಪತ್ರೆಯನ್ನು ಬಳಸಬಹುದು.

Leave A Reply

Your email address will not be published.