‘ಜನೌಷಧಿ’ ಕೇಂದ್ರದ ಕುರಿತು ನಿಮಗೆ ತಿಳಿಯದ ಕೆಲವೊಂದು ಮಾಹಿತಿ| ಇದರ ಉದ್ದೇಶ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಸಾಮಾನ್ಯ ಜನರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ. ದುಬಾರಿ ಬ್ರಾಂಡ್ ಔಷಧಗಳಂತೆಯೇ ಗುಣಮಟ್ಟದ ಔಷಧಿಗಳ‌
ಇದು ಕೂಡಾ ಮಾಡುತ್ತದೆ.

ಈ ಯೋಜನೆಯನ್ನು ಯುಪಿಎ ಸರಕಾರವು 2008 ರಲ್ಲಿ ಪ್ರಾರಂಭಿಸಿತ್ತು ಹಾಗೂ 2015 ರಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ( ಪಿಎಂಬಿಜೆಪಿ) ಎಂದು ನವೀಕರಿಸಲಾಯಿತು.

ಇದನ್ನು ಆರೋಗ್ಯ ರಕ್ಷಣೆಗಾಗಿ ಬರುವ ಹಣದ ಹೊರಗಿನ ವೆಚ್ಚಗಳನ್ನು ಕಡಿಮೆ ಮಾಡಲು ಈ ಕೇಂದ್ರವನ್ನು ದೇಶಾದ್ಯಂತ ತೆರೆಯಲಾಗಿದೆ. ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಅಡಿಯಲ್ಲಿ ಭಾರತದ ಫಾರ್ಮಾ ಪಿಎಸ್ಯುಗಳ ಬ್ಯುರೋವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡಬೇಕಾದ ಔಷಧಿಗಳನ್ನು ಸಂಯೋಜಿಸುವುದು, ಸಂಗ್ರಹಿಸುವುದು, ಸರಬರಾಜು ಮಾಡುವುದು, ಹಾಗೆನೇ ಬ್ರಾಂಡೆಡ್ ಔಷಧಿಗಳ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ವಾಸ್ತವಿಕ ಬೆಲೆಗಿಂತ ಸುಮಾರು 50-90 ಪ್ರತಿಶತದಷ್ಟು ಕಡಿಮೆ ಇದೆ.

ಇತ್ತೀಚೆಗೆ ರೈಲ್ವೇ ಸಚಿವಾಲಯ ಕೂಡಾ ರೈಲ್ವೇ ನಿಲ್ದಾಣಗಳಲ್ಲಿ ಮತ್ತು ಇತರ ರೈಲ್ವೇ ಸಂಸ್ಥೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಅನುಮೋದನೆ ನೀಡಿದೆ.

ಹಾಗೆನೇ ಜನೌಷಧಿ ಕೇಂದ್ರಗಳನ್ನು ಪತ್ತೆಹಚ್ಚಲು ಅಪ್ಲಿಕೇಶನ್ ನನ್ನು ಪ್ರಾರಂಭಿಸಿದೆ. ಈ ತಂತ್ರಜ್ಞಾನದ ಮೂಲಕ ಆರೋಗ್ಯ ಯೋಜನೆಗಳನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಈ ಔಷಧಿ ಕಡಿಮೆ ವೆಚ್ಚ ಹೊಂದಿದ್ದು ಸಮಾಜದ ಎಲ್ಲಾ ವರ್ಗದವರಿಗೆ ಕೈಗಟಕುವ ರೀತಿಯಲ್ಲಿ ಇರುತ್ತದೆ.

Leave A Reply

Your email address will not be published.