ಕನಸಿನಲ್ಲಿ ನೀವು ಸತ್ತರೆ ಅಥವಾ ನಿಮ್ಮನ್ನು ನೀವು ಬೆತ್ತಲೆಯಾಗಿ ನೋಡಿದರೆ ಏನರ್ಥ ?

ಸಾಮಾನ್ಯವಾಗಿ ಕನಸು ಎಲ್ಲರಿಗೂ ಬೀಳುತ್ತದೆ.
ರಾತ್ರಿ ಹೊತ್ತು ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ, ಆದರೆ ಜ್ಯೋತಿಷ್ಯದ ಪುಸ್ತಕಗಳ ಪ್ರಕಾರ ರಾತ್ರಿ ನಿದ್ರಿಸುವಾಗ ಬೀಳುವ ಕನಸುಗಳು ಭವಿಷ್ಯದ ಘಟನೆಗಳನ್ನ ಸೂಚಿಸುತ್ತವೆ. ಕೆಲವೊಂದು ಕನಸುಗಳು ನಿದ್ದೆಯಿಂದ ನಿಮ್ಮನ್ನು ಎಚ್ಚರಿಸುವಷ್ಟು ಭಯಾನಕವಾಗಿರುತ್ತದೆ. ಕೆಲವು ಕನಸು ಇತರರಿಗೆ ಹೇಳಲು ಮುಜುಗರವಾಗುವಂತೆ ಇರುತ್ತದೆ. ಕನಸಿನಲ್ಲಿ ನಿಮ್ಮ ಸಾವು ನೀವೇ ಕಂಡರೆ ಅಥವಾ ಕನಸಿನಲ್ಲಿ ನಿಮ್ಮನ್ನು ಬೆತ್ತಲೆಯಾಗಿ ನೋಡಿದರೆ ಏನರ್ಥ ಎಂಬುದು ಇಲ್ಲಿದೆ ನೋಡಿ.

ಕನಸಿನಲ್ಲಿ ನಿಮ್ಮ ಸಾವು ನೀವೇ ಕಂಡರೆ;
ನೀವು ನಿಮ್ಮನ್ನು ಕನಸಿನಲ್ಲಿ ಸಾಯುತ್ತಿರುವಂತೆ ಕಾಣುವುದು ನಿಮ್ಮೊಳಗಿನ ಭಯದ ಪ್ರತೀಕ. ಅಂತಹ ಕನಸು ನಿಮ್ಮೊಳಗೆ ಇರುವ ಆತಂಕವನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ಮನಸ್ಸಿನಲ್ಲಿ ಅನೇಕ ದಿನಗಳಿಂದ ಒಂದು ಭಯ ಇದೆ. ಅದನ್ನು ನಿವಾರಿಸಿಕೊಳ್ಳಿ ಎಂದರ್ಥ.

​ಕನಸಿನಲ್ಲಿ ನಿಮ್ಮನ್ನು ಬೆತ್ತಲೆಯಾಗಿ ನೋಡಿದರೆ
ಕನಸಿನಲ್ಲಿ ಪ್ರತಿಯೊಬ್ಬರ ಮುಂದೆ ನಿಮ್ಮನ್ನು ನೀವು ನಗ್ನ ಸ್ಥಿತಿಯಲ್ಲಿ ಇರುವುದು ಎಂದರೆ ನಿಜ ಜೀವನದಲ್ಲಿ ನೀವು ನಿಮ್ಮ ಕುರಿತಾದ ಯಾವುದೋ ಗೌಪ್ಯ ವಿಷಯವನ್ನು ಇತರರಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ನಿಮ್ಮ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ ಅದನ್ನು ನೀವು ಇತರರಿಗೆ ಹೇಳಲು ಭಯಪಡುತ್ತೀರಿ.

ಗಾಢವಾದ ನಿದ್ರೆಗೆ ಜಾರಿದಾಗ ನಮ್ಮ ಸುಪ್ತ ಮನಸ್ಸು ಎಚ್ಚೆತ್ತುಕೊಳ್ಳುತ್ತದೆ. ಮನಸ್ಸಿನಲ್ಲಿ ಅಡಗಿದ್ದ ಭಾವನೆಗಳು ಅರಳುತ್ತವೆ. ಅವುಗಳ ಪ್ರಭಾವದಿಂದ ಒಂದಿಷ್ಟು ಕನಸುಗಳು ಕಾಣುತ್ತವೆ. ಅಂತಹ ಕನಸುಗಳಲ್ಲಿ ಕೆಲವು ಸಂತೋಷವನ್ನು ಇನ್ನೂ ಕೆಲವು ದುಃಖವನ್ನು ಉಂಟುಮಾಡುತ್ತವೆ

Leave A Reply

Your email address will not be published.