‘ಕಾಪಾಡಿ ಕಾಪಾಡೀ’ ಎಂದು ರಕ್ಷಣೆಗೆ ಎಷ್ಟೇ ಕೂಗಿದರೂ ಮೂಕಪ್ರೇಕ್ಷಕರಂತೆ ನಿಂತ ಜನರು !! | ನೋಡು ನೋಡುತ್ತಿದ್ದಂತೆಯೇ ಮೂವರು ಜಲಸಮಾಧಿಯಾಗುವ ದೃಶ್ಯ ವೈರಲ್

ಇತ್ತೀಚೆಗೆ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಲೇ ಹೋಗುತ್ತಿದೆ. ಅದಕ್ಕೆ ಜೀವಂತ ಸಾಕ್ಷಿ ಈ ಘಟನೆ. ಮಾನವೀಯತೆ ಮರೆತ ಜನರಿಂದ ಮೂರು ಜನ ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಅಮಾನವೀಯ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ಘಟನೆ ಇದೇ ತಿಂಗಳ 9 ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಬಳಿಯ ಕೆರೆಯಲ್ಲಿ ತೆಪ್ಪ ಮುಗುಚಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಚಿಕ್ಕವಲಗಮಾದಿಯ ರಾಜೇಂದ್ರ (32), ಕೆರೆಕೋಡಿ ಗ್ರಾಮದ ನವೀನ್ (32), ನೇರಳೆಕೆರೆಯ ಮೋಹನ್ (28) ಮೃತರು.

ಶಿವರಾಜ್ ಎಂಬಾತ ಈಜಿಕೊಂಡು ದಡ ಸೇರಿದ ಹಿನ್ನೆಲೆ ಪಾರಾಗಿದ್ದಾನೆ. ಅಂದು ಕೆರೆಯಲ್ಲಿ ನಡೆದ ಸನ್ನಿವೇಶ ಮೊಬೈಲ್‍ನಲ್ಲಿ ಸೆರೆಯಾಗಿದೆ. ‘ಯಾರಾದ್ರು ಕಾಪಾಡಿ’ ಎಂದು ಮೂರು ಜನ ಯುವಕರು ಬೇಡಿಕೊಂಡಿದ್ದಾರೆ. ಆದರೆ ಅಲ್ಲೆ ದಡದಲ್ಲಿ ನಿಂತಿದ್ದ ಸಾಕಷ್ಟು ಜನರು ದಡದಲ್ಲಿ ನಿಂತು ಈಜಿಕೊಂಡು ಬರುವಂತೆ ಸಲಹೆ ನೀಡಿದ್ದಾರೆ.

ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋಗಿ ಮುಗುಚಿದ್ರು, ಯಾರೂ ರಕ್ಷಣೆಗೆ ಬಾರದ ಹಿನ್ನೆಲೆ ನೋಡ ನೋಡುತ್ತಿದ್ದಂತೆ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೆರೆ ಮಧ್ಯದಲ್ಲಿ ಸಿಲುಕಿ ಕಾಪಾಡಿ ಕಾಪಾಡಿ ಎಂದು ಚೀರಾಡಿದ್ರು ಮಾನವೀಯತೆ ಮರೆತ ಜನರು ನಿಂತು ನೋಡುತ್ತಲೆ ಇದ್ದರು. ಈ ಹಿನ್ನೆಲೆಯಲ್ಲಿ 3 ಜನರು ಪ್ರಾಣ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.

Leave A Reply

Your email address will not be published.