ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ವಿಲಿಯಂ ಹರ್ಟ್ ಇನ್ನಿಲ್ಲ !!

ಮಾರ್ವೆಲ್ ಜಗತ್ತಿನ ಪ್ರಸಿದ್ಧ ಹಾಲಿವುಡ್ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಹರ್ಟ್ ಅಕಾ ಜನರಲ್ ಥಡ್ಡಿಯಸ್ ರಾಸ್ (71) ಭಾನುವಾರ ನಿಧನರಾಗಿದ್ದಾರೆ.

ಅವರ 72ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಇರುವ ಮುಂಚೆಯೇ ಬಾರದ ಲೋಕಕ್ಕೆ ಹೋಗಿದ್ದಾರೆ ವಿಲಿಯಂ. ನೆಚ್ಚಿನ ನಟನ ಅಗಲಿಕೆಯ ನೋವನ್ನು ಹಾಲಿವುಡ್ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುವ ಮೂಲಕ ಕಂಬನಿ ಮಿಡಿದಿದೆ. ಅಲ್ಲದೇ, ಆಸ್ಕರ್ ಪ್ರಶಸ್ತಿ ವಿಜೇತ ನಟನ ವ್ಯಕ್ತಿತ್ವದ ಬಗ್ಗೆ ಹಾಲಿವುಡ್ ಕೊಂಡಾಡಿದೆ.


Ad Widget

Ad Widget

Ad Widget

ವಿಲಿಯಂ 1980ರಲ್ಲಿ ವೈಜ್ಞಾನಿಕ ಕಾಲ್ಪನಿಕ ಥ್ರಿಲ್ಲರ್ ಆಲ್ಟರ್ಡ್ ಸ್ಟೇಟ್ಸ್‍ನಲ್ಲಿ ವಿಜ್ಞಾನಿಯಾಗಿ ನಟಿಸಿದ್ದರು. ಇದಕ್ಕಾಗಿ ಅವರು ವರ್ಷದ ಹೊಸ ತಾರೆಗಾಗಿ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ಪಡೆದಿದ್ದರು. 2008 ರ ದಿ ಇನ್ಕ್ರೆಡಿಬಲ್ ಹಲ್ಕ್ ನಲ್ಲಿ ಅವರು ಜನರಲ್ ಥಡ್ಡಿಯಸ್ ರಾಸ್ ಅವರ ಪಾತ್ರದ ಮೂಲಕ ಅವರು ಯುವ ಪೀಳಿಗೆಯ ಚಲನಚಿತ್ರ ಪ್ರೇಮಿಗಳಿಗೆ ಚಿರಪರಿಚಿತರಾದರು.

ನಂತರ ಅವರು ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್, ಅವೆಂಜರ್ಸ್: ಇನ್ಫಿನಿಟಿ ವಾರ್, ಅವೆಂಜರ್ಸ್: ಎಂಡ್‍ಗೇಮ್ ಮತ್ತು ಬ್ಲ್ಯಾಕ್ ವಿಡೋ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ತಂದೆಯ ಅಗಲಿಕೆಯನ್ನು ಪುತ್ರ ವಿಲ್ ಭಾನುವಾರ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ. ನಾಲ್ಕು ಜನ ಮಕ್ಕಳು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ ವಿಲಿಯಂ. ಅಂತಿಮ ವಿಧಾನದ ಕುರಿತು ಕುಟುಂಬ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ.

Leave a Reply

error: Content is protected !!
Scroll to Top
%d bloggers like this: