Whatsapp ನಲ್ಲಿ ಬರುವ ಫೇಕ್ ಮೆಸೇಜ್ ಗಳ ಜಾಲ ಪತ್ತೆ ಹಚ್ಚುವಿಕೆ | ಈ ಸ್ಕ್ಯಾಮ್ ಮೆಸೇಜ್ ಗಳನ್ನು ನೀವೇ ಪತ್ತೆ ಹಚ್ಚಬಹುದು|ಹೇಗೆಂದು ತಿಳಿಯೋಣ ಬನ್ನಿ!

ವಾಟ್ಸ್‌ಆ್ಯಪ್‌ನಲ್ಲಿ ಈಗೀಗ ಸುಳ್ಳು ಅಥವಾ ಸ್ಕ್ಯಾಮ್ ಮೆಸೇಜ್‌ಗಳು ಬರುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ವಂಚನೆಯ ಮೆಸೇಜ್‌ಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುತ್ತದೆ. ಇದನ್ನು ಜನ ನಂಬಿ ಮೋಸ ಹೋಗುತ್ತಲೇ ಇರುತ್ತಾರೆ.

ಅನ್‌ಲಿಮಿಟೆಡ್ ಡೇಟಾ, ಉಚಿತ ರೀಚಾರ್ಜ್, ಫ್ರೀ ಮೊಬೈಲ್, ಪ್ರಸಿದ್ಧ ಇ ಕಾಮರ್ಸ್ ತಾಣಗಳ ಫೇಕ್ ಆಫರ್ ಹೀಗೆ ಈರೀತಿಯ ಅನೇಕ ಮೆಸೇಜ್‌ಗಳು ದಿನಕ್ಕೆ ಹತ್ತು ಹಲವು ಬಾರಿ ನಮ್ಮ‌ಮೊಬೈಲ್ ಫೋನ್ ಗೆ ಬಂದು ಸೇರುತ್ತೆ. ಕೆಲವರಂತೂ ಈ ಸ್ಕ್ಯಾಮ್ ಮೆಸೇಜ್ ಗಳಿಗೆ ತಮ್ಮ‌ ವೈಯಕ್ತಿಕ ಡಿಟೇಲ್ ಗಳನ್ನು ಕೂಡಾ ಕೊಟ್ಟು ಹಣ ಕಳೆದುಕೊಂಡು,
ಮೋಸಹೋದವರು ಕೂಡ ಇದ್ದಾರೆ.

ಇವತ್ತು ನಾವು ಈ ಫೇಕ್ ಮೆಸೇಜ್ ಮತ್ತು ವಂಚಕರ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ವಾಟ್ಸ್‌ಆ್ಯಪ್ ಬಳಸುವವರು ಹೇಗೆ ಕಂಡು ಹಿಡಿಯಬಹುದರ ಬಗ್ಗೆ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಗಮನಿಸಿರುವಂತೆ ಈ ಫೇಕ್ ಮೆಸೇಜ್‌ಗಳು ಉಚಿತ ಮತ್ತು ಅನ್‌ಲಿಮಿಟೆಡ್ ಎಂಬ ಸೇವೆ ಬಗ್ಗೆ ಇರುತ್ತವೆ. ಉದಾಹರಣೆಗೆ ಅನ್‌ಲಿಮಿಟೆಡ್ ಡೇಟಾ, ಉಚಿತ ವಾಯ್ಸ್ ಕರೆ ಆಫರ್‌ಗಳನ್ನು ನೀಡುತ್ತೇವೆ ಎಂದು ಇಂಥಹ ಫೇಕ್ ಮೆಸೇಜ್‌ಗಳು. ಇವುಗಳನ್ನು ಎಂದಿಗೂ ತೆರೆಯಬೇಡಿ. ಇವು 100% ಫೇಕ್ ಮೆಸೇಜ್.

ಅಧಿಕೃತ ಮೆಸೇಜ್‌ಗಳು ಯಾವುದೇ ಅಕ್ಷರ ದೋಷದಿಂದ ಕೂಡಿರುವುದಿಲ್ಲ. ಆದರೆ ಈ ಫೇಕ್ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಇದನ್ನು ಗಮನ ಹರಿಸುವುದು ಮುಖ್ಯ.

ಅಧಿಕೃತವಾಗಿ ಪ್ರಕಟಿಸಲಾದ ಮೆಸೇಜ್ ಸಾಮಾನ್ಯವಾಗಿ ಲಿಂಕ್ ಹೊಂದಿರುವುದಿಲ್ಲ. ಆದರೆ ಫೇಕ್ ಮೆಸೇಜ್‌ಗಳು ಲಿಂಕ್ ಅನ್ನು ಹೊಂದಿರುತ್ತವೆ. ಉದಾಹರಣೆ ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಕುರಿತ ಫೇಕ್ ಮೆಸೇಜ್ ಗಳನ್ನು ಹೊಂದಿರುತ್ತದೆ.

ತಪ್ಪು ಯುಆರ್‌ಎಲ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ ಹಾಗೂ ಫಾರ್ವರ್ಡ್ ಸಹ ಮಾಡದಿರಿ. ಹಾಗಾಗಿ ಯುಆರ್ ಎಲ್ ಮೇಲೆ ಗಮನ ಇರಲಿ.

ವಾಟ್ಸ್‌ಆ್ಯಪ್‌ನಲ್ಲಿ ಬಂದ ಅನ್‌ಲಿಮಿಟೆಡ್ ಮತ್ತು ಉಚಿತ ಸೇವೆಗಳ ಮೆಸೇಜ್‌ಗಳನ್ನು ನಂಬುವ ಮೊದಲು ಟೆಲಿಕಾಂ ಆಪರೇಟರ್‌ಗಳಿಂದ ಖಚಿತಪಡೆದುಕೊಳ್ಳಿ.

ವಾಟ್ಸ್‌ಆ್ಯಪ್ ಮೆಸೇಜ್‌ಗಳು ಉಚಿತ ರೀಚಾರ್ಜ್, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡುತ್ತದೆ. ಇಂಥಹ ಮೆಸೇಜ್ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಬರೆದಿರುತ್ತದೆ. ಹಾಗಾಗಿ ಗ್ರಾಹಕರೇ ಇಂತಹ ಮೆಸೇಜ್‌ಗಳನ್ನು ಕಡೆಗಣಿಸುವುದು ಒಳ್ಳೆಯದು.

Leave A Reply

Your email address will not be published.