ಕಬ್ಬಿನ ಗದ್ದೆಯಲ್ಲಿತ್ತು ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ!|ಅಷ್ಟಕ್ಕೂ ಅಷ್ಟೊಂದು ಬೆಲೆಬಾಳುವ ವಸ್ತುಗಳು ಹೊಲದಲ್ಲಿ ಪತ್ತೆಯಾಗಲು ಕಾರಣ !!?

ಬೆಳಗಾವಿ:ಕಳ್ಳತನ ಮಾಡಿ ಮನೆಯ ಮೂಲೆಯಲ್ಲೊ ಅಥವಾ ಗುಂಡಿಗಳಲ್ಲೋ ಇಟ್ಟಂತಹ ಘಟನೆ ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕಬ್ಬಿನ ಗದ್ದೆಯಲ್ಲಿ ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದೆ.

ಈ ಕಬ್ಬಿನ ಗದ್ದೆಯಲ್ಲಿದ್ದ ಅಷ್ಟೊಂದು ಹಣ ನೋಡಿ ಪೊಲೀಸರೇ ಶಾಕ್ ಆಗುವಂತಹ ವಿಚಿತ್ರ ಘಟನೆ ನಡೆದಿದೆ. ಈ ಕಳ್ಳತನ ಡಿಸಿಸಿ ಬ್ಯಾಂಕ್‌ನಲ್ಲಿರುವ ಕ್ಲರ್ಕ್‌ನಿಂದಲೇ ಕಳ್ಳತನವಾಗಿದೆ. ಆದರೆ ಕದ್ದ ಹಣ, ಚಿನ್ನವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟು,ಕಳ್ಳ ಕ್ಲರ್ಕ್ ಬಸವರಾಜು ಮಾತ್ರ ನನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಾರೆ.


Ad Widget

Ad Widget

Ad Widget

4 ಕೋಟಿ ರೂ ಮೌಲ್ಯದ ಹಣ, 3 ಕೆಜಿ 148 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು,ಕಾಲ್ ರೆಕಾರ್ಡ್ ತೆಗೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಮುಂದಿನ ತಿಂಗಳು ಬಸವರಾಜು ಹಸೆಮಣೆ ಏರಬೇಕಿತ್ತು. ಹಾಗಾಗಿ ಮದುವೆಗೆ ಹಣ ಬೇಕೆಂದು ಕಳ್ಳತನದ ಹಾದಿ ಹಿಡಿದಿದ್ದಾರೆ ಎಂಬುದು ತಿಳಿದು ಬಂದಿದೆ.

Leave a Reply

error: Content is protected !!
Scroll to Top
%d bloggers like this: