SSLC ‘ ಪರೀಕ್ಷೆ ಸಿದ್ಧತೆ ಸರಣಿ’ ಪ್ರಸಾರ| ಆಕಾಶವಾಣಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ| ಹೆಚ್ಚಿನ ಮಾಹಿತಿ ಇಲ್ಲಿದೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022 ನೇ ಸಾಲಿನ ಮಾರ್ಚ್ / ಏಪ್ರಿಲ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಮಾರ್ಚ್ 28 ರಿಂದ ಏಪ್ರಿಲ್ 11, 2022 ರವರೆಗೆ ಪರೀಕ್ಷೆ ನಡೆಯಲಿದೆ.

ಬೆಂಗಳೂರು ಆಕಾಶವಾಣಿ ಕೇಂದ್ರದಿಂದ SSLC ಪರೀಕ್ಷೆ ಸಿದ್ಧತೆ ಸರಣಿ’ಯನ್ನು ಪ್ರಸಾರವನ್ನು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಡಲಾಗುತ್ತಿದೆ.

‘ಎಸ್ಎಸ್ಎಲ್‌ಸಿ ಪರೀಕ್ಷೆ ಸಿದ್ಧತೆ ಸರಣಿ’ ಯಲ್ಲಿ ವಿದ್ಯಾರ್ಥಿಗಳು ಯಾವ ವಿಷಯಗಳಿಗೆ ಹೇಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಇಲ್ಲಿ ಹೇಳಲಾಗಿದೆ.

ಹಿಂದಿ, ಕನ್ನಡ, ವಿಜ್ಞಾನ, ಗಣಿತ ಭಾಗ 1 ರ ಪರೀಕ್ಷೆ ಸಿದ್ಧತೆ ಸರಣಿ ಈಗಾಗಲೇ ಆಗಿದೆ. ಆದರೆ ಇನ್ನು ನಾಲ್ಕು ವಿಷಯಗಳ ಸಿದ್ಧತೆ ಸರಣಿ ಜತೆಗೆ ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆ, ಪರೀಕ್ಷೆ ಬರೆಯುವ ಕಾರ್ಯಕ್ರಮ, ಪರೀಕ್ಷಾ ಮಂಡಳಿಯ ನಿರ್ದೇಶಕರ ಮಾಹಿತಿ, ಮೊರಾಜಿ ದೇಸಾಯಿ ವಸತಿ ಶಾಲೆಗಳ ಮುಖ್ಯಸ್ಥರಿಂದ ಪ್ರಮುಖ ಮಾಹಿತಿಗಳ ಸರಣಿ ಇದೆ.

‘ಎಸ್ಎಸ್ಎಲ್‌ಸಿ ಪರೀಕ್ಷೆ ಸಿದ್ಧತೆ ಸರಣಿ’ ಪ್ರಸಾರದ ವೇಳಾಪಟ್ಟಿ ಈ ಕೆಳಗೆ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆಯಬೇಕು.

ಸೋಮವಾರದಿಂದ ಶುಕ್ರವಾರದ ವರೆಗೆ ಮಧ್ಯಾಹ್ನ 02.35 ರಿಂದ 3 ಗಂಟೆವರೆಗೆ ಈ ತರಗತಿ ನಡೆಯುತ್ತದೆ.

07-03-2022 – ಹಿಂದಿ ತೃತೀಯ ಭಾಷೆ
08-03-2022 – ಕನ್ನಡ ಪ್ರಥಮ ಭಾಷೆ
09-03-2022 – ವಿಜ್ಞಾನ ಭಾಗ – 1

10-03-2022 – ವಿಜ್ಞಾನ ಭಾಗ- 2

11-03-2022 – ಗಣಿತ ಭಾಗ 1 14-03-2022 -ಗಣಿತ ಭಾಗ 2
15-03-2022 – ಸಮಾಜ ವಿಜ್ಞಾನ ಭಾಗ 1
16-03-2022 – ಸಮಾಜ ವಿಜ್ಞಾನ ಭಾಗ 2
17-03-2022 – ಇಂಗ್ಲಿಷ್ ದ್ವಿತೀಯ ಭಾಷೆ
18-03-2022 – ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮಾನಸಿಕ ಸಿದ್ಧತೆ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Leave A Reply

Your email address will not be published.