ದೇಶದ ಆರ್ಥಿಕತೆಗೂ ಪುರುಷರ ಅಂಡರ್ ವೇರ್ ಗೂ ಗುಪ್ತ ಸಂಬಂಧ ಉಂಟಂತೆ ಗೊತ್ತೇ, ಇಲ್ಲಿದೆ ಪುರುಷರ ಒಳಉಡುಪು ಖರೀದಿಯ ಬಗ್ಗೆ ಕುತೂಹಲಕಾರಿ ಮಾಹಿತಿ !!

ಅನೇಕ ವೈವಿದ್ಯಮಯ ಒಳ ಉಡುಪು ಜಾಹೀರಾತುಗಳು ಬರುತ್ತದೆ. ಸ್ತ್ರೀಯರಷ್ಟೇ ಒಳ ಉಡುಪು ಖರೀದಿಗೆ ಜಾಸ್ತಿ ಒಲವು ತೋರಿಸುತ್ತಾರೆ ಎನ್ನುವುದೊಂದು ಆಪಾದನೆ ಸ್ತ್ರೀಯರ ಮೇಲಿದೆ. ಅದು ದೊಡ್ಡ ಮಟ್ಟಿಗೆ ನಿಜ ಕೂಡಾ !! ಆದರೆ ಪುರುಷರೂ ಒಳ ಉಡುಪು ಖರೀದಿಸಲು ಆಸಕ್ತಿ ತೋರಿಸುತ್ತಾರೆ, ಆದರೆ ಅದು ಎಂದು, ಹೇಗೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ವಿಚಿತ್ರ ನೋಡಿ, ಆರ್ಥಿಕತೆಗೂ ಪುರುಷರ ಒಳಉಡುಪು ಖರೀದಿಗೂ ಹತ್ತಿರದ ಸಂಬಂಧವಿದೆ ಎಂದು ಒಂದು ಸಮೀಕ್ಷೆ ಸಾಬೀತುಪಡಿಸಿದೆ.

ಪುರುಷರ ಒಳ ಉಡುಪು ಖರಿದಿಸಲು ದೇಶದ ಆರ್ಥಿಕತೆ ಕಾರಣ ಎಂದು ಈ ಕುರಿತು ಅತ್ಯಂತ ಕುತೂಹಲಕರ ವರದಿಯೊಂದು ಸಾಬೀತುಪಡಿಸಿದೆ. ಆರ್ಥಿಕತೆಗೂ ಪುರುಷರ ಒಳ ಉಡುಪಿಗೂ ಹೇಗೆ ಸಂಬಂಧ ಎಂಬುದು ಇಲ್ಲಿ ತಿಳಿಯಿರಿ.

ಪುರುಷರ ಹಣಕಾಸಿನ ಸ್ಥಿತಿ ಹದಗೆಟ್ಟಾಗ ಹೊಸ ಒಳಉಡುಪುಗಳನ್ನು ಖರೀದಿಸುವುದನ್ನು ಕಡಿಮೆ ಮಾಡುತ್ತಾರೆ. ಹಳೆ ಒಳ ಉಡುಪುಗಳನ್ನೇ ಆದಷ್ಟು ಹೆಚ್ಚು ಕಾಲ ಬಳಸುತ್ತಾರೆ. ‘ಇರೋ ನೂರೆಂಟು ಸಮಸ್ಯೆಗಳಿವೆ, ಕೈಯಲ್ಲಿ ದುಡ್ಡಿಲ್ಲ, ಹೊಸ ಚಡ್ಡಿ ಬೇರೆ ಕೇಡು ‘ ಎಂದುಕೊಳ್ಳುವ ಗಂಡಸು,
ಕೈಯಲ್ಲಿ ಕಾಸು ಇಲ್ಲದಿದ್ದಾಗ ಹೊಸ ಒಳ ಉಡುಪುಗಳನ್ನು ಖರೀದಿಸುವುದಿಲ್ಲ ಎನ್ನುತ್ತದೆ ಅಧ್ಯಯನ. ಕೈಯಲ್ಲಿ ದುಡ್ಡೇ ಇಲ್ಲ, ಆರ್ಥಿಕತೆ ತೂತು ಬಿದ್ದು ಹೋಗಿರುವಾಗ ಅಂಡರ್ ವೇರ್ ಹರಿದು ಹೋಗಿದ್ದರೂ ಕ್ಯಾರೇ ಎನ್ನದ ಸ್ವಭಾವ ಪುರುಷ ಮಹಾಶಯರದ್ದು.

ಉದ್ಯೋಗ ನಷ್ಟದ ಭೀತಿ, ಕೈಯಲ್ಲಿ ಹಣ ಇಲ್ಲದಿರುವುದು, ಆರ್ಥಿಕ ನಷ್ಟ ಮುಂತಾದ ಸ್ಥಿತಿಗತಿಗಳು ಪುರುಷರ ಮನೋಭಾವದ ಮೇಲೆ ಪರಿಣಾಮ ಬೀರುತ್ತವೆಯಂತೆ. ಅದೆಲ್ಲ ಸರಿ ಆದ್ರೆ ಮಾತ್ರ ಒಳಗಿನ ಬಟ್ಟೆಯ ಬಗ್ಗೆ ಗಮನ, ಇಲ್ಲದೇ ಹೋದರೆ ಬೇಡ. ಹೀಗೆ ವೈಯಕ್ತಿಕ ಆರ್ಥಿಕ ಸ್ಥಿತಿ ಹೆಚ್ಚಿದಲ್ಲಿ ಪುರುಷರು ಒಳ ಉಡುಪು ಖರೀದಿ ಮಾಡುತ್ತಾರಂತೆ.

ಕೊವಿಡ್ ಮತ್ತು ಲಾಕ್ ಡಾನ್ ಯಿಂದ ಪುರುಷರ ಒಳ ಉಡುಪುಗಳ ಮಾರಾಟ ಗಣನೀಯವಾಗಿ ಇಳಿಕೆಯಾಯಿತಂತೆ. 2019-20 ಕ್ಕೆ ಹೋಲಿಸಿದರೆ 2020-21ರಲ್ಲಿ ಪುರುಷರ ಒಳಉಡುಪುಗಳ ಮಾರಾಟವು ಶೇಕಡಾ 12 ರಷ್ಟು ಹೆಚ್ಚಾಗಿದೆ ಎಂದು ಬಿಗ್ ಡಬ್ಲ್ಯೂ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಸೂಚಿಸುತ್ತವೆ ಎಂದು ವರದಿಯಾಗಿದೆ.

Leave A Reply

Your email address will not be published.