ತೆರಿಗೆ ಪಾವತಿದಾರರೇ ಗಮನಿಸಿ | ಮುಂಗಡ ತೆರಿಗೆ ಪಾವತಿಗೆ ನಾಳೆ ಕೊನೆ ದಿನ, ತಪ್ಪಿದರೆ ತೆರಬೇಕಾದೀತು ಭಾರಿ ದಂಡ !!

ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಇನ್ನೂ ಮುಂಗಡ ತೆರಿಗೆಯನ್ನು ಠೇವಣಿ ಮಾಡದಿದ್ದರೆ, ತಕ್ಷಣವೇ ಮಾಡಿ. ಯಾಕೆಂದರೆ 2021-22 ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆ ಕಂತುಗಳನ್ನು ಸಲ್ಲಿಸಲು ಮಾರ್ಚ್ 15, 2022 ಕೊನೆಯ ದಿನಾಂಕವಾಗಿದೆ.

ತೆರಿಗೆದಾರರು ಒಂದು ವರ್ಷದಲ್ಲಿ ನಾಲ್ಕು ಕಂತುಗಳಲ್ಲಿ ಗಳಿಕೆಯ ಮೇಲೆ ಮುಂಗಡ ತೆರಿಗೆಯನ್ನು ಪಾವತಿಸಬೇಕು. ಈಗ ಪಾವತಿಸಬೇಕಾಗಿರುವುದು ನಾಲ್ಕು ಕಂತುಗಳ ಕೊನೆಯ ಕಂತು ಆಗಿರುತ್ತದೆ. ತೆರಿಗೆ ಕಾನೂನಿನ ಪ್ರಕಾರ, ತೆರಿಗೆದಾರರು ವಾರ್ಷಿಕವಾಗಿ ಅಂದಾಜು ತೆರಿಗೆಯನ್ನು 15%, 45%, 75% ಮತ್ತು 100% ಹೀಗೆ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಈ ನಾಲ್ಕು ಕಂತುಗಳನ್ನು ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು ಮಾರ್ಚ್ 15 ರೊಳಗೆ ಪಾವತಿಸಬೇಕು.


Ad Widget

Ad Widget

Ad Widget

ಆರ್ಥಿಕ ವರ್ಷದಲ್ಲಿ 10,000 ರೂ ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ಎಲ್ಲಾ ತೆರಿಗೆದಾರರಿಗೆ ಅನ್ವಯವಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, ಒಬ್ಬ ವ್ಯಕ್ತಿಯ ಆದಾಯದ ಮೂಲವು ವೇತನಕ್ಕಿಂತ ಬೇರೆಯಾಗಿರುವುದಿಲ್ಲ. ಹಾಗಾಗಿ ವೇತನ ಪಡೆಯುವವರು ಮುಂಗಡ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಏಕೆಂದರೆ ಉದ್ಯೋಗಿಯ ಕಂಪನಿಯು ಈ ತೆರಿಗೆಯನ್ನು ಉದ್ಯೋಗಿಯ ವೇತನದಿಂದ ಕಡಿತಗೊಳಿಸಿ ತೆರಿಗೆ ಇಲಾಖೆಗೆ ಸಲ್ಲಿಸುತ್ತದೆ.

ನಿಗದಿತ ಸಮಯದೊಳಗೆ ತೆರಿಗೆದಾರನು ತನ್ನ ಮುಂಗಡ ತೆರಿಗೆಯನ್ನು ಪಾವತಿಸಲು ವಿಫಲವಾದರೆ, ಮೂರು ತಿಂಗಳವರೆಗೆ ಕಂತುಗಳಲ್ಲಿ ಪಾವತಿಸಬೇಕಾದ ಮೊತ್ತಕ್ಕೆ ತಿಂಗಳಿಗೆ 1% ರಂತೆ ಸೆಕ್ಷನ್ 234C ಅಡಿಯಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ನೀವು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಮುಂಗಡ ತೆರಿಗೆಯನ್ನು ಪಾವತಿಸಬಹುದು. ಆಫ್‌ಲೈನ್‌ನಲ್ಲಿ ಪಾವತಿಸಲು, ಆದಾಯ ತೆರಿಗೆ ಇಲಾಖೆಯು ಅಧಿಕೃತಗೊಳಿಸಿದ ಬ್ಯಾಂಕ್ ಶಾಖೆಗಳಲ್ಲಿ ತೆರಿಗೆ ಪಾವತಿ ಚಲನ್ ಅನ್ನು ಬಳಸಬಹುದು. ಆನ್‌ಲೈನ್ ಪಾವತಿ ಮಾಡಲು, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ http://www.incometaxindia.gov.in ಗೆ ಲಾಗ್ ಇನ್ ಮಾಡಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ತೆರಿಗೆಯನ್ನು ಪಾವತಿ ಮಾಡಬಹುದು.

Leave a Reply

error: Content is protected !!
Scroll to Top
%d bloggers like this: