ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಸೊತ್ತುಗಳನ್ನು ಕಂಡು ಬೆಚ್ಚಿಬಿದ್ದ ಕಳ್ಳರು !! | ಅಷ್ಟಕ್ಕೂ ಆ ಮನೆಯಲ್ಲೇನಿತ್ತು ಗೊತ್ತಾ !??

ಕಳ್ಳತನ ಮಾಡಲು ತೆರಳಿದ್ದ ಕಳ್ಳರ ಗುಂಪೊಂದು ಮನೆಯಲ್ಲಿದ್ದ ಸೊತ್ತುಗಳನ್ನು ಕಂಡು ಹೌಹಾರಿದೆ. ಅಂದಹಾಗೆ ಅಂತಹದ್ದೇನಿತ್ತು ಗೊತ್ತಾ ಆ ಮನೆಯಲ್ಲಿ?? ಅಲ್ಲಿದ್ದದ್ದು ಬೇರೇನೂ ಅಲ್ಲ…ಗ್ರೇನೇಡ್, ಮದ್ದುಗುಂಡುಗಳು !!

ಹೌದು. ಕಳ್ಳರ ತಂಡವೊಂದು ಮನೆಯೊಂದಕ್ಕೆ ಕನ್ನ ಹಾಕಲು ತೆರಳಿದ್ದಾಗ ಆ ಮನೆಯ ಶೌಚಾಲಯದಲ್ಲಿದ್ದ ಗ್ರೇನೇಡ್, ಮದ್ದುಗುಂಡುಗಳನ್ನು ನೋಡಿ ಬೆಚ್ಚಿಬಿದ್ದ ಘಟನೆ ನಡೆದಿದೆ. ಅಂದಹಾಗೆ ಈ ಘಟನೆ ನಡೆದಿದ್ದು ಹರ್ಯಾಣದ ಗುರುಗ್ರಾಮ್‌ ಅನ್ನೋ ಪ್ರದೇಶದಲ್ಲಿ. ಶೌಚಾಲಯದಲ್ಲಿ ಗ್ರೇನೇಡ್‌, ಮದ್ದು ಗುಂಡುಗಳು ಸ್ಫೋಟಗೊಳ್ಳಬಹುದು ಎಂಬ ಆತಂಕದಲ್ಲಿ ತಕ್ಷಣ ಮನೆಯಿಂದ ಕದ್ದ ಚೀಲವನ್ನು ಬಿಟ್ಟು ಪಲಾಯನ ಮಾಡಿದ್ದಾರೆ.

ಇನ್ನು ಮನೆಯನ್ನು ಸ್ಫೋಟಿಸಲು ಪ್ಲಾನ್ ಮಾಡಲಾಗಿತ್ತೋ ಅಥವಾ ಮನೆಯಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸಲಾಗಿತ್ತೋ ಅನ್ನೋದು ತಿಳಿಯದೆ ಚಡಪಡಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲು ಹೆದರುತ್ತಿದ್ದ ಅವರು ಕೊನೆಗೂ ಹೇಗೋ ಧೈರ್ಯ ಮಾಡಿ ಮರುದಿನ ಬೆಳಗ್ಗೆ ಪೊಲೀಸರಿಗೆ ಕರೆ ವಿಷಯ ತಿಳಿಸಿದ್ದಾರೆ.

ಕಳ್ಳರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆ ಮನೆಯಲ್ಲಿ 2 ಗ್ರೇನೇಡ್‌ಗಳು, 2 ಪಾಲಿಥೀನ್‌ ಬ್ಯಾಗ್‌ಗಳು, ಅದರಲ್ಲಿ ಒಂದರಲ್ಲಿ ಮಿಲಿಟರಿಯಲ್ಲಿ ಬಳಸಲ್ಪಡುವ ಗ್ರೇನೇಡ್‌ನ್ನು ತುಂಬಿಸಲಾಗಿತ್ತು. ಬಿಕಾಟ್‌ ಸ್ಟ್ರಿಪ್‌ (ಯುದ್ಧದ ಸಮಯದಲ್ಲಿ ಶತ್ರುಗಳನ್ನು ದಾರಿ ತಪ್ಪಿಸಲು ಬಳಸಲ್ಪಡುವ ಬೆಂಕಿ ಹತ್ತಿಕೊಂಡಾಗ ಸ್ವಯಂಚಾಲಿತವಾಗಿ ಗುಂಡಿನ ಚಕಮಕಿಯನ್ನು ಅನುಕರಿಸುವ ಸಾಧನ), ಮತ್ತು 43 ಖಾಲಿ ಕಾರ್ಟ್ರಿಡ್ಜ್‌ಗಳು (ಲಾಂಗ್‌ರೇಂಜ್ ಆಟೋಮ್ಯಾಟಿಕ್ ವೆಪನ್) ಪತ್ತೆಯಾಗಿದೆ. ಅವುಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.