ಒಂದೇ ವಿದ್ಯಾರ್ಥಿನಿಯ ಮೋಹ ಪಾಶಕ್ಕೆ ಬಿದ್ದ ಇಬ್ಬರು ಶಿಕ್ಷಕರು | ಆದರೆ ವಿದ್ಯಾರ್ಥಿನಿಯ ಒಲವು ಯಾರ ಮೇಲೆ ?

0 22

ಶಾಲೆಗೆ ಬಂದು ಪಾಠ ಕಲಿಸುವ ಶಿಕ್ಷಕರೇ ವಿದ್ಯಾರ್ಥಿನಿಯ ಮೋಹ ಪಾಶಕ್ಕೆ ಬಿದ್ದಿದ್ದಾರೆ. ಅದು ಕೂಡಾ ಒಬ್ಬ ಶಿಕ್ಷಕ ಅಲ್ಲ. ಇಬ್ಬರು. ಇಷ್ಟು ಸಾಲದು ಎಂಬಂತೆ ಇವರಿಬ್ಬರು ಪ್ರೀತಿಸಿದ್ದು ಒಬ್ಬಳೇ ವಿದ್ಯಾರ್ಥಿನಿಯನ್ನು.

ಒಟ್ಟಿನಲ್ಲಿ ಈ ಲವ್ ಇಬ್ಬರ ಜೀವ ಬಲಿ ತೆಗೆದುಕೊಂಡಿದೆ. ಪ್ರೀತಿಯ ಮಾಯೆಗೆ ಬಿದ್ದವರು ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮತ್ತೆ ಮತ್ತೆ ನಿಜವಾಗುತ್ತಿದೆ. ಹೌದು ಈ ದುರದೃಷ್ಟಕರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಕುರೈಥಿಯಲ್ಲಿ.

ಕುರೈಥಿಯ ಎಚ್ ಪಿ ತಿವಾರಿ ಪಬ್ಲಿಕ್ ಶಾಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಶಾಲೆಯ ಶಿಕ್ಷಕರಾದ ಅನೂಜ್ ಮತ್ತು ಸೂರಜ್ ಎಂಬುವವರು 3 ವರ್ಷಗಳಿಂದ ಒಬ್ಬರಿಗೊಬ್ಬರಿಗೆ ಗೊತ್ತಾಗದ ಹಾಗೇ ಅದೇ ಶಾಲೆಯ ವಿದ್ಯಾರ್ಥಿಯನ್ನು ಪ್ರೀತಿ ಮಾಡುತ್ತಿದ್ದರು.

ಆದರೆ, ಕಹಾನಿ ಮೇ ಟ್ವಿಸ್ಟ್ ಎನ್ನುವ ಹಾಗೇ, ವಿದ್ಯಾರ್ಥಿನಿ ಇಷ್ಟ ಪಡುತ್ತಿದ್ದದ್ದು ಸೂರಜ್ ನನ್ನು.

ಈ ವಿಷಯ ಹೇಗೋ ತಿಳಿದ ಅನೂಜ್, ಸೂರಜ್ ಮೇಲೆ ಕೋಪಗೊಂಡು ವಿದ್ಯಾರ್ಥಿನಿಯನ್ನು ಬಿಟ್ಟುಬಿಡುವಂತೆ ಜಗಳ ಮಾಡಿದ್ದಾನೆ. ನಂತರ ಸೂರಜ್ ತನ್ನ ಸ್ನೇಹಿತನ ಜತೆ ಸೇರಿಕೊಂಡು ಅನೂಜ್ ನನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಮೃತ ದೇಹವನ್ನು ಬಾವಿಗೆ ಎಸೆದಿದ್ದಾರೆ.

ಆದರೆ , ಅನಂತರ ಏನಾಯ್ತೋ ಗೊತ್ತಿಲ್ಲ ದಿನ ಬೆಳಗಾಗುವುದರಲ್ಲಿ ಅನೂಜ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಲ್ಲಿ ಕೊಲೆ ವಿಷಯ ಬಹಿರಂಗವಾಗುತ್ತೆ ಎಂದು ತಿಳಿದು ರದ್ದಾಂತವಾಗಿ ಬಿಡುತ್ತೋ ಎನ್ನುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನೂಜ್ ಸ್ನೇಹಿತ ರತ್ಯೇಶ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Leave A Reply