ನನ್ನ ಕ್ಷೇತ್ರದಲ್ಲಿ ಮಾಂಸ ತಿಂದರೆ ಜೋಕೆ ಎಂದ ಬಿಜೆಪಿ ಶಾಸಕ ! ಹೀಗೆಂದ ಬಿಜೆಪಿ ಶಾಸಕ ಯಾರು ಗೊತ್ತಾ ?

ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನೋ ಹಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ನಂತರ ತಮ್ಮ ಹೇಳಿಕೆಯನ್ನುಈಗ ಬದಲಾಯಿಸಿ ಸ್ಪಷ್ಟನೆ ನೀಡಿದ್ದಾರೆ.

ಲೋನಿಯಲ್ಲಿ ರಾಮರಾಜ್ಯವಿದೆ. ಇಲ್ಲಿ ಒಂದೇ ಒಂದು ಮಾಂಸದ ಅಂಗಡಿ ಇದ್ದರೂ ನಾನು ಅಧಿಕಾರಿಗಳಿಗೆ ಹೇಳುತ್ತೇನೆ.
ನನ್ನ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳ ವ್ಯಾಪಾರ ನಡೆದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಈ ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ಯಾಕೆ ನೀಡಬೇಕು. ಜನರು ಹಾಲು ಮತ್ತು ತುಪ್ಪ ಸೇವಿಸಲಿ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.

ಈಗ ಈ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಶಾಸಕ ನಂದ ಕಿಶೋರ್ ತಮ್ಮ ಹೇಳಿಕೆಯಿಂದ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಈಗ ಅವರು ಹೇಳುವ ಪ್ರಕಾರ, ಸಂಪೂರ್ಣ ನಿಷೇಧದ ಅರ್ಥದಲ್ಲಿ ನಾನು ಆ ಹೇಳಿಕೆಯನ್ನು ನೀಡಿಲ್ಲ, ಬದಲಿಗೆ ಯಾವುದೇ ಅಕ್ರಮ ಅಥವಾ ಪರವಾನಗಿ ರಹಿತ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Leave A Reply