KSOU ನಿಂದ ಪಿಹೆಚ್ ಡಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಎಪ್ರಿಲ್ 09 ಕೊನೆಯ ದಿನಾಂಕ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2021 22ನೇ ಸಾಲಿಗೆ ರೆಗ್ಯೂಲರ್ ಮೋಡ್ ನಲ್ಲಿ ಪಿಹೆಚ್‌ಡಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2022

ದಂಡ ಶುಲ್ಕ ರೂ.500 ದೊಂದಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09-04-2022

ಸಾಮಾನ್ಯ ಪ್ರವೇಶಾತಿ ಪರೀಕ್ಷೆ ದಿನಾಂಕ: ಮುಂದೆ ತಿಳಿಸಲಾಗುವುದು.

ಸಂದರ್ಶನದ ದಿನಾಂಕ : ಮುಂದೆ ತಿಳಿಸಲಾಗುವುದು.

ಪಿಹೆಚ್‌ಡಿ ಪದವಿ ನೀಡುವ ವಿಷಯಗಳು ಈ ಕೆಳಗೆ ನೀಡಲಾಗಿದೆ

ಕನ್ನಡ, ಹಿಂದಿ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ವಾಣಿಜ್ಯಶಾಸ್ತ್ರ,ನಿರ್ವಹಣಾಶಾಸ್ತ್ರ, ಭೂಗೋಳಶಾಸ್ತ್ರ, ಜೀವ ರಸಾಯನ ಶಾಸ್ತ್ರ, ರಸಾಯನಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರ.

ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ರೂ.2000/-, ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.1000/-.

ಅಭ್ಯರ್ಥಿಗಳು ಇತರೆ ಹೆಚ್ಚಿನ ಮಾಹಿತಿಗೆ ಕೆಎಸ್‌ಒಯು ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿವರ ಇಂತಿದೆ.

  • ಕೆಎಸ್‌ಒಯು ನಲ್ಲಿ ಪಿಹೆಚ್‌ಡಿ ಪದವಿ ಪ್ರವೇಶಕ್ಕೆ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬೇಕು.
  • ಯುಜಿಸಿ ಜೆಆರ್‌ಎಫ್/ ಎನ್‌ಇಟಿ/ ಗೇಟ್/ಜಿಆರ್ಇ/ ಕೆಸೆಟ್/ ಎಸ್ಎಲ್‌ಇಟಿ / ಎಂಫಿಲ್ ಪಾಸ್ ಆದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
  • ಸಿಇಟಿ ವಿನಾಯಿತಿ ಪಡೆದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವುದು ಕಡ್ಡಾಯ.

ಸಾಮಾನ್ಯ ಪ್ರವೇಶ ಪರೀಕ್ಷೆ ಕೇಂದ್ರ: ಕರಾಮುವಿ ನಿಲಯ, ಮೈಸೂರು.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಪ್ರತಿ ಜತೆ, ಅಗತ್ಯ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ : ಮುಖ್ಯಸ್ಥರು, ಪಿಹೆಚ್‌ಡಿ ವಿಷಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರಾಮುವಿ, ಮುಕ್ತ ಗಂಗೋತ್ರಿ, ಮೈಸೂರು, 570006.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್‌ಸೈಟ್ ಲಿಂಕ್ ಇಲ್ಲಿದೆ.

Leave A Reply

Your email address will not be published.