ಪುರುಷ ಜನನಾಂಗ ಹೊಂದಿದ ಪತ್ನಿ | ಸುಪ್ರೀಂ ಕೋರ್ಟ್ ಮೊರೆ ಹೋದ ಪತಿ

ನವದೆಹಲಿ : ತನ್ನ ಪತ್ನಿಗೆ ಪುರುಷ‌ ಜನನಾಂಗ ಇರುವುದರಿಂದ ವಂಚನೆ ಮಾಡಿದ್ದಕ್ಕಾಗಿ ಕ್ರಿಮಿನಲ್ ಮೊಕ್ಕದ್ದಮೆ ಹೂಡಬೇಕು ಎಂದು ಪತಿಯ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

ಪತಿಯು ತನ್ನ ಪತ್ನಿಗೆ ಶಿಶ್ನ ಮತ್ತು ಅಪೂರ್ಣ ಕನ್ಯಾ ಪೊರೆ ಇದೆ ಎಂಬ ವೈದ್ಯಕೀಯ ವರದಿಯನ್ನು ಬಹಿರಂಗ ಪಡಿಸಿದ ನಂತರ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಿದೆ.

ಇದರ ಅನ್ವಯ ಪತ್ನಿಯ ವಿರುದ್ಧ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420( ವಂಚನೆ) ಅಡಿಯಲ್ಲಿ ಕ್ರಿಮಿನಲ್ ಅಪರಾಧ ಮಾಡಲಾಗಿದೆ. ಏಕೆಂದರೆ ಇಲ್ಲಿ ಹೆಂಡತಿ ‘ ಪುರುಷ’ ಆಗಿದ್ದಾನೆ ಎಂದು ಪತಿ ಪರ ವಕೀಲ ತಿಳಿಸಿದ್ದಾರೆ.

ಹೆಂಡತಿಗೆ ಅಪೂರ್ಣ ಕನ್ಯಾಪೊರೆ ಇದೆ ಅದರ ಜೊತೆಗೆ ಶಿಶ್ನವೂ ಇದೆ. ಆಸ್ಪತ್ರೆಯ ವೈದ್ಯಕೀಯ ವರದಿಯು ಅದನ್ನು ಸ್ಪಷ್ಟವಾಗಿ ಹೇಳಿದೆ. ಶಿಶ್ನ ಇದ್ದಾಗ ಅವಳು ಹೇಗೆ ಹೆಣ್ಣಾಗುತ್ತಾಳೆ ಎಂದು ಪತಿಯ ಅಹವಾಲು.

ಇದನ್ನು ಪರಿಗಣಿಸಿ ಎಫ್ ಐಆರ್ ದಾಖಲಿಸಿ ಸರಿಯಾಗಿ ವಿಚಾರಣೆಗೆ ಒಳಪಡಿಸಬೇಕೆಂದು ಪತಿಯು ಹೇಳಿದ್ದಾನೆ. ಹೆಂಡತಿ ಹಾಗೂ ಆಕೆಯ ತಂದೆ ಸೇರಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.

ನಂತರ ಪೀಠವು ಪತ್ನಿ ಹಾಗೂ ಆಕೆಯ ತಂದೆ ಹಾಗೂ ಮಧ್ಯಪ್ರದೇಶದ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಹಾಗೂ ಆರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

Leave A Reply

Your email address will not be published.