ಜನರು ಈಗ ಹಿಂದುತ್ವದ ಆಧಾರದ ಮೇಲೆ ಮತ ಹಾಕುತ್ತಿದ್ದಾರೆ- ಸಿದ್ದರಾಮಯ್ಯ

0 9

ಜನರು ಸಾಧನೆ ನೋಡಿ ಮತ ಹಾಕುವುದನ್ನು ಕಡಿಮೆ ಮಾಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಮತ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯಪುರ ಜಿಲ್ಲೆಗೆ ತೆರಳುವ ಮುನ್ನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಆವಧಿಗೂ ಮುನ್ನವೆ ವಿಧಾನ ಸಭೆ ಚುನಾವಣೆ ಎದುರಾದರೆ ಕಾಂಗ್ರೆಸ್ ಪಕ್ಷ ತಯಾರಿದೆ ಎಂದರು.

ಜಿಲ್ಲಾ ಪಂಚಾಯತ್ ಚುನಾವಣೆ ಮಾಡದೇ ಇರುವವರು, ವಿಧಾನ ಸಭೆ ಚುನಾವಣೆ ಮಾಡುತ್ತಾರೆಯೇ, ನನಗೇನೂ ಹಾಗೇ ಅನಿಸುವುದಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನ ಚುನಾವಣೆಗೂ ಹೋಗುವುದಿಲ್ಲ ಎಂದರು.

ಸಿದ್ದರಾಮಯ್ಯ,ರ ಹೆಸರನ್ನು ಭಾರತ ರತ್ನ ಪ್ರಶಸ್ತಿ ಗೆ ಶಿಫಾರಸ್ಸು ಮಾಡಬೇಕು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಈಗಲಟನ್ ರೆಸಾರ್ಟ್ ಗೆ ದಂಡ ಹಾಕಿದಕ್ಕೆ ಹೀಗೆ ಮಾತನಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ, ಕೋಟ್೯ನಲ್ಲಿ ಕೂಡಾ ನಮ್ಮ ತೀಮಾ೯ನ ಎತ್ತಿ ಹಿಡಿದಿದೆ. ಸ್ಕೈರ್ ಫೀಟ್ ಲೆಕ್ಕದಲ್ಲಿ 982 ಕೋಟಿ ಆಗಿತ್ತು. ಕುಮಾರಸ್ವಾಮಿ ಇದೀಗ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಮ್ಮನ್ನು ಕುಮಾರಸ್ವಾಮಿಯಾಗಲಿ ಇನ್ನ್ಯಾರೇ ಟಾರ್ಗೆಟ್ ಮಾಡಿದರೂ ಹೆದರುವುದಿಲ್ಲ. ನನ್ನ ಕಂಡರೆ ಕುಮಾರಸ್ವಾಮಿಗೆ ಭಯ. ಹೀಗಾಗಿ ಸದಾ ನನ್ನ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿ, 1980ರಲ್ಲಿ ವಾಜಪೇಯಿ, ಅಡ್ವಾಣಿ ಇದ್ದರು, ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿದ್ದರು. ಹೀಗಾಗಿ ಎಲ್ಲಾ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವುದು ಸಹಜ ಎಂದ ಅವರು, ಕೆ. ಎಸ್ ಈಶ್ವರಪ್ಪ ಅವರು ರಾಜ್ಯಪಾಲರ ವಿರುದ್ಧ ಪತ್ರ ಬರೆದಿದ್ದು, ಯತ್ನಾಳ ಸರಕಾರದ ವಿರುದ್ಧ ಮಾತನಾಡಿಲ್ಲವೆ ಎಂದು ಉಲ್ಲೇಖಿಸಿದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರನ್ನೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದಾರೆ. ಆಗ ಅವರೇ ಕಣ್ಣಿರು ಹಾಕಿಸಿ, ಜೈಲಿಗೆ ಹಾಕುತ್ತೇವೆ ಎಂದು ಹೆದರಿಸಿಲ್ಲವಾ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಭ್ರಷ್ಟ ಸರಕಾರವಾಗಿದೆ. ಕಾಂಗ್ರೆಸ್ ಬಿಟ್ಟು ಹೋಗಿರುವ ಶಾಸಕರು ಮತ್ತೆ ಪುನಃ ಬಂದರೆ, ಅವರನ್ನು ಸೇಪ೯ಡೆ ಮಾಡಿಕೊಳ್ಳುವುದಿಲ್ಲ ಎಂದ ಅವರು, ನರೇಂದ್ರ ಮೋದಿ ಅವರು ಮುಂಬರುವ ದಿನಗಳಲ್ಲಿ ಕನಾ೯ಟಕ ಟಾರ್ಗೆಟ್ ಮಾಡಿದರೂ, ಬಿಜೆಪಿ ನಿಶ್ಚಿತವಾಗಿ ಸೋಲುತ್ತದೆ ಎಂದರು.

Leave A Reply