ಪುತ್ತೂರು : ಬುಡಬುಡಿಕೆಯವರ ಮಾತು ನಂಬಿ ಹಣ ಕಳೆದುಕೊಂಡ ಮಹಿಳೆ| ಕಳೆದುಕೊಂಡ ಹಣ ಮರಳಿ ಪಡೆದದ್ದಾದರೂ ಹೇಗೆ ?

ಪುತ್ತೂರು : ಭವಿಷ್ಯ ಹೇಳುವ ನೆಪದಲ್ಲಿ ಮನೆಗೆ ಬಂದ ಬುಡಬುಡಿಕೆಯವರಲ್ಲಿ ಮನೆಯ ಮಂದಿ ಸಂಕಷ್ಟ ಹೇಳಿಕೊಂಡು ಮೊದಲೇ ಕಷ್ಟದಲ್ಲಿದ್ದ ಮಹಿಳೆ ಈಗ ಪಡಬಾರದ ಕಷ್ಟ ಪಟ್ಟ ಪಾಡೊಂದು ಕಾಣಿಯೂರು ಸಮೀಪದ ಪುಣ್ಚಾತ್ತಾರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಭವಿಷ್ಯ ಹೇಳಲು ಬಂದ ಬುಡಬುಡಿಕೆಯವರಲ್ಲಿ ಇಲ್ಲಿನ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇದಕ್ಕಾಗಿ 15,000 ರೂ. ಗೂ ಹೆಚ್ಚು ಹಣವನ್ನು ಬುಡುಬುಡಿಕೆಯವರು ಪಡೆದುಕೊಂಡಿದ್ದಾರೆ. ಆದರೂ ಸಮಸ್ಯೆ ಬಗೆ ಹರಿಯಲಿಲ್ಲ. ಈ ಬಗ್ಗೆ ಮಹಿಳೆ‌ ಬುಡಬುಡಿಕೆಯವರಲ್ಲಿ ವಿಚಾರಿಸಿದಾಗ ಹಾಸನದಲ್ಲಿ ಇನ್ನೊಂದು ಪೂಜೆ ಮಾಡಲಿದೆ ಎಂದು ಹೇಳಿ ಅವರು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಸಮಯದಲ್ಲಿ ಎಚ್ಚೆತ್ತುಕೊಂಡ ಮಹಿಳೆ ಇದೊಂದು ಮೋಸ ಮಾಡುವ ತಂತ್ರ ಎಂದು ತಿಳಿದು ಪುತ್ತೂರು ಮಹಿಳಾ‌ ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿಚಾರಣೆ ಮಾಡಿದ ಮಹಿಳಾ‌ ಪೊಲೀಸರು ನಕಲಿ ಬುಡುಬುಡುಕೆಯವರನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯಿಂದ ಪಡೆದ ಹಣವನ್ನು ಮಹಿಳೆಗೆ ವಾಪಾಸು ಕೊಡಿಸಿದ್ದಾರೆ ಎಂದು ವರದಿಯಾಗಿದೆ.


Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: