ಮೊದಲ ಬಾರಿಗೆ ಬಿಕಿನಿಯಲ್ಲಿ ಮಿಂಚಿದ ‘ವರು’ | ಕಾಲಿವುಡ್ ಬ್ಯೂಟಿಗೆ ಫಿದಾ ಆದ ಅಭಿಮಾನಿಗಳು

ಕಾಲಿವುಡ್ ಹಿರಿಯ ನಟ ಶರತ್ ಕುಮಾರ್ ಅವರ ಹಿರಿಯ ಪುತ್ರಿ‌ 37 ವರ್ಷದ ನಟಿ ವರಲಕ್ಷ್ಮೀ ಶರತ್ ಕುಮಾರ್ ಪೂರ್ಣಪ್ರಮಾಣದ ನಾಯಕಿ ಅಲ್ಲದಿದ್ದರೂ ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ತುಂಬಾ ಹೆಸರು ಮಾಡಿದ್ದಾರೆ.

‘ಕ್ರ್ಯಾಕ್’ ಮತ್ತು ‘ನಾಂಧಿ’ ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ವರು ತೆಲುಗು ಚಿತ್ರರಂಗದಲ್ಲಿ ಉತ್ತಮ ಹೆಸರು ಪಡೆದು ಕೊಂಡಿದ್ದಾರೆ.

ಇತ್ತಿಚೆಗೆ ನಟನೆಯಿಂದ ಸ್ವಲ್ಪ ಬಿಡುವು ಮಾಡಿಕೊಂಡು ಮಾಲ್ಡೀವ್ಸ್ ಬೀಚ್ ನಲ್ಲಿ ಕಾಲ ಕಳೆದು ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವೀಡಿಯೋವೊಂದನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಿಕಿನಿ ತೊಟ್ಟು ಕ್ಯಾಮೆರಾಗೆ ವರು ಫೋಸ್ ನೀಡಿದ್ದು ಇದೇ ಮೊದಲ ಬಾರಿಗೆ. ಇದನ್ನ ಕಂಡ ವರು ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ವೀಡಿಯೋ ಸಿಕ್ಕಾಪಟ್ಟೆ ಲೈಕ್ ಆಗಿದ್ದು, ಅಧಿಕ ಲೈಕ್ಸ್ ಬಂದಿದೆ.

ವೀಡಿಯೋ ಲಿಂಕ್ ಈ ಕೆಳಗೆ ನೀಡಲಾಗಿದೆ

https://www.instagram.com/reel/Ca8-YQej7N4/?utm_source=ig_web_copy_link
Leave A Reply

Your email address will not be published.