ಬಟ್ಟೆಯೊಳಗೆ 52 ಹಲ್ಲಿ ಮತ್ತು 9 ಹಾವುಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ವ್ಯಕ್ತಿ ಅರೆಸ್ಟ್!! | ಆತನ ಪ್ಯಾಂಟ್, ಜಾಕೆಟ್ ಅನ್ನು ತಪಾಸಣೆ ಮಾಡಿ ಬೆಚ್ಚಿಬಿದ್ದ ಖಾಕಿ

ಬಟ್ಟೆಯೊಳಗೆ ಕದ್ದುಮುಚ್ಚಿ ಚಿನ್ನ ಸಾಗಿಸುತ್ತಿದ್ದ ಅದೆಷ್ಟೋ ಮಂದಿ ಸಿಕ್ಕಿಬಿದ್ದಿದ್ದಾರೆ. ಆದರೆ ಇಲ್ಲಿ ‌ಬಟ್ಟೆಯೊಳಗೆ 52 ಹಲ್ಲಿ ಮತ್ತು 9 ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

30 ವರ್ಷದ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಬಟ್ಟೆಯೊಳಗೆ ಹಲ್ಲಿ, ಹಾವುಗಳನ್ನು ಬಚ್ಚಿಟ್ಟುಕೊಂಡು ಕ್ಯಾಲಿಫೋರ್ನಿಯಾದಲ್ಲಿ ಯುಎಸ್ ಗಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು,ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


Ad Widget

Ad Widget

Ad Widget

ಫೆ. 25 ರಂದು ಮೆಕ್ಸಿಕೋದಿಂದ ಸ್ಯಾನ್ ಯಸಿಡ್ರೊ ಗಡಿ ದಾಟಲು ಹೊರಟಿದ್ದನು. ಈ ವೇಳೆ ಹೆಚ್ಚುವರಿ ತಪಾಸಣೆ ಮಾಡಿದಾಗ ಆತನ ಬಟ್ಟೆಯೊಳಗೆ ಹಲ್ಲಿ, ಹಾವುಗಳು ಕಂಡುಬಂದಿದೆ. ಒಂಬತ್ತು ಹಾವುಗಳು, 43 ಕೊಂಬಿನ ಹಲ್ಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಟ್ರಕ್‍ ಅನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್‌ ಹೇಳಿಕೆಯಲ್ಲಿ ತಿಳಿಸಿದೆ.

ಸದ್ಯ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆತ ಜಾಕೆಟ್, ಪ್ಯಾಂಟ್ ಪಾಕೆಟ್‍ಗಳು ಮತ್ತು ತೊಡೆಸಂದು ಪ್ರದೇಶದಲ್ಲಿ ಸಣ್ಣ ಚೀಲಗಳಲ್ಲಿ 52 ಹಲ್ಲಿಗಳು ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡಿದ್ದನು. ವ್ಯಕ್ತಿಯ ಬಟ್ಟೆಯ ಒಳಗೆ ಹಾವು, ಹಲ್ಲಿಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ ಎಂದು ಯುಎಸ್ ಗಡಿ ಏಜೆಂಟರು ತಿಳಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: