ಗಾಢ ಪಿಂಕ್ ಬಣ್ಣದ ಮೀನು ಮಾಲ್ಡೀವ್ಸ್ ನಲ್ಲಿ ಪತ್ತೆ…! ಅಬ್ಬಾ ಇದರ ಸೌಂದರ್ಯವೇ…!

ದ್ವೀಪರಾಷ್ಟ್ರ ಮಾಲ್ಡೀವ್ಸ್ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಪ್ರವಾಸಿಗರ ಸಂಖ್ಯೆ ಬಹಳ ಹೆಚ್ಚಿದೆ. ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೀಚ್ ಡೆಸ್ಟಿನೇಶನ್ ಮಾಲ್ಡೀವ್ಸ್ ನಲ್ಲಿ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್ ಕೂಡಾ ಇದೆ. ಈ ಸಂಶೋಧನಾ ಸಂಸ್ಥೆ ಹೊಸ ಸಂಗತಿಯನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಪಿಂಕ್ ಬಣ್ಣದ ಮೀನಿನ ಫೋಟೋಗಳು ಈಗ ವೈರಲ್ ಆಗಿದೆ. ಅಲಂಕಾರಿಕಾ ಮೀನಾಗಿ ಬಳಸಲು ಬೆಸ್ಟ್ ಎನಿಸುವ ಸುಂದರವಾದ ಮೀನು ಮಾಲ್ಡೀವ್ಸ್ ನ ಯಾವ ಮೂಲೆಯಲ್ಲಿ ಅಡಗಿತ್ತೋ ಇಷ್ಟು ದಿನ.

ಗುಲಾಬಿ ಮುಸುಕು ಹಾಕಿದ ಫೇರಿ ವ್ರಾಸ್ಸೆ ( ಸಿರ್ರಿಲಾಬ್ರಸ್ ಫಿನಿಫೆಮ್ಮಾ) ಎಂಬ ಮೀನನ್ನು ಪರಿಚಯಿಸಿದೆ. ‘ ಫಿನಿಫೆನ್ಮಾ’ ಅಂದರೆ ಧೀವಿಹಿಯಲ್ಲಿ ಗುಲಾಬಿಗೆ ಹೋಲುತ್ತದೆ.

ಈ ಮೀನು ಅಕ್ವೇರಿಯಂ ಉದ್ಯಮದಲ್ಲಿ ಪ್ರಸಿದ್ಧವಾಗಿದೆ. ಈ ಮೀನು ಮಾಲ್ಡೀವ್ಸ್ ಮತ್ತು ಶ್ರೀಲಂಕಾದ ಆಳವಾದ ಬಂಡೆಗಳಿಂದ 40-70m ನಡುವಿನ ಆಳದ ವ್ಯಾಪ್ತಿಯೊಂದಿಗೆ ಕಂಡು ಬರುತ್ತದೆ. ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್, ಸಿಡ್ನಿ ವಿಶ್ವವಿದ್ಯಾಲಯ, ಆಸ್ಟ್ರೇಲಿಯನ್ ಮ್ಯೂಸಿಯಂ ರಿಸರ್ಚ್ ಇನ್ಸ್ಟಿಟ್ಯೂಟ್, ಫೀಲ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಮತ್ತು ಮಾಲ್ಡೀವ್ಸ್ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ಇದನ್ನು ಇತ್ತೀಚೆಗೆ ವಿವರಿಸಿ ಪ್ರಕಟಿಸಲಾಗಿದೆ.

Leave A Reply

Your email address will not be published.