Day: March 9, 2022

50ರ ಹರೆಯದವನಿಂದ 18ರ ಯುವತಿಯ ಮೇಲೆ ನಿರಂತರ ಅತ್ಯಾಚಾರ| ಗರ್ಭಪಾತ ಮಾತ್ರೆಯ ಅಡ್ಡಪರಿಣಾಮ ಯುವತಿ ಸಾವು

18 ರ ಹರೆಯದ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಲ್ಲದೇ, ಗರ್ಭಪಾತದ ಮಾತ್ರೆ ನೀಡಿದ್ದರಿಂದ ಆಕೆ ದುರಂತ ಸಾವಿಗೀಡಾದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮಾಜಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿರುವ ರಾಜೇಂದ್ರ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಸ್ ಐ ಚರ್ಚ್ ತುಮಕೂರು ಇಲ್ಲಿನ ಸಭಾಪಾಲನಾ ಸದಸ್ಯನಾಗಿರುವ ರಾಜೇಂದ್ರಕುಮಾರ್, 2013 ರಿಂದ 2018 ರ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ‌ ತುಮಕೂರು ಪಾಲಿಕೆಯಲ್ಲಿ ನಾಮನಿರ್ದೇಶಿತ ಸದಸ್ಯನೂ ಆಗಿದ್ದ. ಈ ಸಮಯದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿಯ …

50ರ ಹರೆಯದವನಿಂದ 18ರ ಯುವತಿಯ ಮೇಲೆ ನಿರಂತರ ಅತ್ಯಾಚಾರ| ಗರ್ಭಪಾತ ಮಾತ್ರೆಯ ಅಡ್ಡಪರಿಣಾಮ ಯುವತಿ ಸಾವು Read More »

ರಾಜ್ಯದಲ್ಲಿ ಮತ್ತೆ ಇರುವಿಕೆಯನ್ನು ತೋರಿಸಿಕೊಂಡ ಮಂಗನ ಖಾಯಿಲೆ!! ಜನರಲ್ಲಿ ಹೆಚ್ಚಿದ ಆತಂಕ-ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದೆ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕಳೆದ ವರ್ಷ ಮಲೆನಾಡಿಗರ ನಿದ್ದೆಗೆಡಿಸಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಈ ಬಾರಿಯೂ ಕೆಲವೆಡೆ ತನ್ನ ಇರುವಿಕೆಯನ್ನು ತೋರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಇಬ್ಬರು ಮಹಿಳೆಯರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದು ಪರೀಕ್ಷಿಸಿದ ವೈದ್ಯರು ಮಂಗನ ಕಾಯಿಲೆ ಎಂದು ದೃಢಪಡಿಸಿದ್ದು, ಇಬ್ಬರಲ್ಲಿ ಒಬ್ಬರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದರು. ಒಟ್ಟಾರೆಯಾಗಿ ಕಳೆದ ಬಾರಿ ರಾಜ್ಯದಲ್ಲಿ ಹೆಚ್ಚು ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಈ ಬಾರಿಯೂ ಕೆಲವರಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿ ಜಾಗೃತಿ ಮೂಡಿಸುವ ಕಾರ್ಯಕ್ಕೆ …

ರಾಜ್ಯದಲ್ಲಿ ಮತ್ತೆ ಇರುವಿಕೆಯನ್ನು ತೋರಿಸಿಕೊಂಡ ಮಂಗನ ಖಾಯಿಲೆ!! ಜನರಲ್ಲಿ ಹೆಚ್ಚಿದ ಆತಂಕ-ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದೆ ಆರೋಗ್ಯ ಇಲಾಖೆ Read More »

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ Xiaomi 12 ಅಲ್ಟ್ರಾ ಸ್ಮಾರ್ಟ್ ಫೋನ್ !! | ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ವಾಟರ್ ಪ್ರೂಫ್ ಫೀಚರ್ ನ ಈ ಮೊಬೈಲ್ ಗೆ ಹೆಚ್ಚಿದ ಬೇಡಿಕೆ

Xiaomi ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ Xiaomi ಗ್ರಾಹಕರಿಗೆ ಹೊಸ ಸುದ್ದಿಯೊಂದನ್ನು ನೀಡಿದೆ. ಈ ಕಂಪೆನಿಯ ಬಹು ನಿರೀಕ್ಷಿತ ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್‌ಫೋನ್, Xiaomi 12 ಅಲ್ಟ್ರಾ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. Xiaomi Snapdragon 8 Gen 1 ಚಿಪ್ ಬದಲಿಗೆ ಮುಂಬರುವ Snapdragon 8 Gen 1+ SoC ನೊಂದಿಗೆ ಸಾಧನವನ್ನು ಬಿಡುಗಡೆ ಮಾಡುವ ಬಗ್ಗೆ ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಟಿಪ್‌ಸ್ಟರ್ @Shadow_leaks …

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ Xiaomi 12 ಅಲ್ಟ್ರಾ ಸ್ಮಾರ್ಟ್ ಫೋನ್ !! | ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ವಾಟರ್ ಪ್ರೂಫ್ ಫೀಚರ್ ನ ಈ ಮೊಬೈಲ್ ಗೆ ಹೆಚ್ಚಿದ ಬೇಡಿಕೆ Read More »

ಕಡಬ : ನಿಗದಿತ ಮೊತ್ತಕ್ಕೆ ವ್ಯಾಪಾರ ಕುದುರಿಸಿ ಬಳಿಕ ದುಪ್ಪಟ್ಟು ಹಣ ಕೇಳಿದ ತಂಡ, ಮನೆಯವರಿಗೆ ಬೆದರಿಕೆ

ಕಡಬ: ಮನೆಯೊಂದಕ್ಕೆ ಕಿಟಿಕಿಯ ಪರದೆಯನ್ನು ಮಾರಾಟ ಮಾಡಲು ಮೂವರಿದ್ದ ಯುವಕರ ತಂಡವೊಂದು ಆಗಮಿಸಿ ನಿಗದಿತ ಮೊತ್ತಕ್ಕೆ ವ್ಯಾಪಾರ ಕುದುರಿಸಿ ಪರದೆಯನ್ನು ಕಿಟಿಕಿಗೆ ಅಳವಡಿಸಿದ ಬಳಿಕ ದುಪ್ಪಟ್ಟು ಹಣ ಕೇಳಿ ಕೊಡದಿದ್ದಾಗ ಮನೆಯವರಿಗೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಎಂಬಲ್ಲಿ ಬುಧವಾರ ನಡೆದಿದೆ. ಸಬಳೂರು ಆಶೋಕ್ ರೈ ಎಂಬುವವರ ಮನೆಗೆ ಕೇರಳ ರಾಜ್ಯ ನೊಂದಣಿಯಾದ(ಕೆ ಎಲ್ 61 ಡಿ 5567 ) ಕಾರಿನಲ್ಲಿ ಆಗಮಿಸಿದ ಮೂವರು ಯುವಕರು ಆರಂಭದಲ್ಲಿ ಒಂದು ಪರದೆಗೆ …

ಕಡಬ : ನಿಗದಿತ ಮೊತ್ತಕ್ಕೆ ವ್ಯಾಪಾರ ಕುದುರಿಸಿ ಬಳಿಕ ದುಪ್ಪಟ್ಟು ಹಣ ಕೇಳಿದ ತಂಡ, ಮನೆಯವರಿಗೆ ಬೆದರಿಕೆ Read More »

DCGI ನಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ Covovax ನೀಡಲು ಅನುಮತಿ

ನವದೆಹಲಿ : ಸೀರಮ್ ಇನ್ಸ್ಟಿಟ್ಯೂಟ್ ನ covovax ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ DCGI ನಿಂದ ಅನುಮೋದನೆ ನೀಡಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಅವರು, ತಮ್ಮ ಕಂಪನಿ ತಯಾರಿಸಿದ ಕೋವೋವ್ಯಾಕ್ಸ್ ಲಸಿಕೆಯನ್ನು ವಯಸ್ಕರಿಗೆ ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಡಿಸಿಜಿಐನಿಂದ ಅನುಮೋದನೆ‌ ನೀಡಲಾಗಿದೆ ಎಂದು ಹೇಳಿದ್ದಾರೆ. ಜಾಗತಿಕ ಪ್ರಯೋಗಗಳಲ್ಲಿ Novavax ಶೇ.90 ಕ್ಕಿಂತ ಹೆಚ್ಚು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ. DCGI ಯಿಂದ ವಯಸ್ಕರಿಗೆ ಮತ್ತು …

DCGI ನಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ Covovax ನೀಡಲು ಅನುಮತಿ Read More »

ಕಡಬ ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಭೇಟಿ

ಕೇವಲ ಎಚ್ಚರಿಕೆ ಮಾತ್ರವಲ್ಲ, ಅಧಿಕಾರಿಗಳ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ -ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಕಡಬ: ಕಡಬ ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಅವ್ಯವಹಾರಗಳ ಸಮಗ್ರ ತನಿಖೆ ನಡೆಸುತ್ತೇನೆ, ನಾನು ಬಂದು ಕೇವಲ ಎಚ್ಚರಿಕೆ ಕೊಟ್ಟು ಅಲ್ಲಿಗೆ ಬಿಡುವುದಿಲ್ಲ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.ಅವರು ಮಾ.೯ರಂದು ಕಡಬ ತಾಲೂಕು ಕಛೇರಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಡಬ ಕಂದಾಯ …

ಕಡಬ ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಭೇಟಿ Read More »

ಬೆಳ್ತಂಗಡಿ : ಮನೆಯ ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಆಭರಣ ಕಳ್ಳತನ |ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮನೆಯ ಬೀರುವಿನಲ್ಲಿಟ್ಟಿದ್ದ ಹಣ, ಹಾಗೂ ಚಿನ್ನಾಭರಣ ಕಳವಾದ ಘಟನೆ ನೆರಿಯಾ ಗ್ರಾಮದ ಕುಲೆನಾಡಿ ಎಂಬಲ್ಲಿ ನಡೆದಿದೆ. ಚಂದ್ರಾವತಿ ಎಂಬವರ ಮನೆಯಿಂದ 65,000 ರೂ. ನಗದು ಮತ್ತು ಸುಮಾರು 1,75,000 ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.ಚಂದ್ರಾವತಿ ಅವರು-2021ರ ನ. 24ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಂಪಿನಿಂದ 2,47,000 ರೂ.ಸಾಲ ಪಡೆದಿದ್ದರು. ಆ ಪೈಕಿ 65,000 ರೂ.ಗಳನ್ನು ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟಿದ್ದರು. ಅಲ್ಲದೆ, 2021ರ ಸೆ. 6ರಂದು ಬೀರುವಿನಲ್ಲಿ ಆಭರಣ ಇಡುವ ಪೆಟ್ಟಿಗೆಯಲ್ಲಿ 24 …

ಬೆಳ್ತಂಗಡಿ : ಮನೆಯ ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಆಭರಣ ಕಳ್ಳತನ |ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ | ಬೇಸರ ವ್ಯಕ್ತಪಡಿಸಿದ ನಾಗ ಚೈತನ್ಯ ಕುಟುಂಬ

ನಟಿ ಸಮಂತಾ ಮತ್ತು ನಾಗಚೈತನ್ಯ 2021 ಅಕ್ಟೋಬರ್ 2 ರಂದು ವಿಚ್ಛೇದನ ಪಡೆದುಕೊಂಡು ದೂರವಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅಲ್ಲಿಂದ ಇಲ್ಲಿ ತನಕ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ಈ ಜೋಡಿಯ ಸ್ನೇಹ ಕೂಡ ಎಲ್ಲೂ ಕಾಣಿಸಿಲ್ಲ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋದ ನಟಿ ತಮ್ಮ ಮದುವೆ ಸೀರೆಯನ್ನು ಹಿಂದಿರುಗಿಸಿದ್ದಾರಂತೆ. ಮದುವೆಯಲ್ಲಿ ನಾಗಚೈತನ್ಯ ಮನೆಯವರು ಕೊಟ್ಟಿದ್ದ ರೇಷ್ಮೆ ಸೀರೆಯನ್ನು ವಾಪಸ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ಸಮಂತಾ …

ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ | ಬೇಸರ ವ್ಯಕ್ತಪಡಿಸಿದ ನಾಗ ಚೈತನ್ಯ ಕುಟುಂಬ Read More »

ಮೇಕೆದಾಟು ಯೋಜನೆಗೆ ನಟ ಚೇತನ್ ವಿರೋಧ!

ಬೆಂಗಳೂರು : ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದಂತ ಅವರು, ಅರಣ್ಯ ಪ್ರದೇಶವನ್ನು ನಾಶ ಮಾಡಿ, ಆ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೋದಕ್ಕೆ ನಮ್ಮ ವಿರೋಧವಿದೆ ಎಂದು ನಟ ಚೇತನ್ ಹೇಳಿದ್ದಾರೆ. ಮೇಕೆದಾಟು ಅಣೆಕಟ್ಟನ್ನು ಹೊಸದಾಗಿ ಕಟ್ಟೋದಕ್ಕೆ ನಮ್ಮ ವಿರೋಧವಿದೆ. ಅರಣ್ಯ ನಾಶ ಇದರಿಂದ ಆಗಲಿದೆ. ಜೀವ ಸಂಕುಲಕ್ಕೆ ಹೊಡೆತ ಬೀಳಲಿದೆ. ಆ ವ್ಯಾಪ್ತಿಯ ಜನ ಬೀದಿ ಪಾಲಾಗಲಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ. ಜಲಸಂಪನ್ಮೂಲವನ್ನು ವೈಜ್ಞಾನಿಕವಾಗಿ ಪೋಲು ಮಾಡದಂತೆ ತಡೆಯಲು, ಕೃಷಿ ಕುಡಿಯುವ …

ಮೇಕೆದಾಟು ಯೋಜನೆಗೆ ನಟ ಚೇತನ್ ವಿರೋಧ! Read More »

ಸುಬ್ರಹ್ಮಣ್ಯ: ಪಾತ್ರೆ ತೊಳೆಯುವ ಸಿಂಕ್ ನಲ್ಲಿ ಬುಸುಗುಟ್ಟಿದ ಭಾರೀ ಗಾತ್ರದ ಕಾಳಿಂಗ !!

ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಹರಿಹರ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿ ಸ್ಥಳಿಯರನ್ನು ಭಯಭೀತರನ್ನಾಗಿಸಿದ ಘಟನೆ ನಡೆದಿದೆ. ಕಲ್ಮಕಾರು ಗ್ರಾಮದ ರಾಧಾಕೃಷ್ಣ ಎಂಬವರ ಮನೆಯಲ್ಲಿ ಈ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅರಣ್ಯ ಪರಿಸರದಲ್ಲಿ ಮನೆ ಇದ್ದ ಕಾರಣ ಕಾಳಿಂಗ ಸರ್ಪ ಆಹಾರ ಹುಡುಕುತ್ತಾ ಮನೆ ವಠಾರ ಸೇರಿದೆ. ಮನೆಯ ಪಾತ್ರೆ ತೊಳೆಯುವ ಸಿಂಕಿನಲ್ಲಿ ಮಲಗಿದ್ದ ಕಾಳಿಂಗ ಸರ್ಪವನ್ನು ನೋಡಿ ಒಮ್ಮೆಗೆ ಎಲ್ಲರೂ ದಿಗ್ಭ್ರಾಂತರಾಗಿದ್ದಂತೂ ನಿಜ. ಕಾಳಿಂಗನನ್ನು ಸೆರೆ ಹಿಡಿಯಲು …

ಸುಬ್ರಹ್ಮಣ್ಯ: ಪಾತ್ರೆ ತೊಳೆಯುವ ಸಿಂಕ್ ನಲ್ಲಿ ಬುಸುಗುಟ್ಟಿದ ಭಾರೀ ಗಾತ್ರದ ಕಾಳಿಂಗ !! Read More »

error: Content is protected !!
Scroll to Top