ಲವ್ ಫೈಲ್ಯೂರ್ ಆಗಿ ಲೈಫ್ ಬೇಡ ಎಂದು ಲೈವ್ ಆಗಿ ವಿಷ ಕುಡಿದ ಪ್ರೇಮಿ|

ಪ್ರೇಯಸಿ ಪತ್ನಿಯಾಗಲ್ಲ ಎಂಬ ಬೇಸರದಿಂದ ನೊಂದುಕೊಂಡ ಪ್ರೇಮಿ, ಪ್ರಿಯತಮೆಗೋಸ್ಕರ ಜೀವ ಕಳೆದುಕೊಳ್ಳಲು ಲೈವ್ ಬಂದು ವಿಷ ಸೇವಿಸಿದ ಪ್ರಕರಣವೊಂದು ನಡೆದಿದೆ.

ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿರ್ನಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ.

ಇಲ್ಲಿನ ಕಳವಾರ ಗ್ರಾಮದ ಕಿಶೋರ್ ( 25) ಪ್ರೇಯಸಿಗಾಗಿ ವಿಷ ಕುಡಿದ ಪ್ರೇಮಿ. ಈತ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಮನೆಯವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ಅಷ್ಟು ಮಾತ್ರವಲ್ಲದೇ ಪ್ರೇಯಸಿ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಷ ಕುಡಿದು ಆತ್ಮಹತ್ಯೆ ಮಾಡುವ ವೀಡಿಯೋ ಲೈವ್ ಮಾಡಿದ್ದಾನೆ.

ತೀವ್ರ ಅಸ್ವಸ್ಥಗೊಂಡಿರೋ ಈತನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.