ವಿಮಾನದಲ್ಲಿ ಪೈಲೆಟ್ ಹಾಗೂ ಕೋ‌ ಪೈಲೆಟ್ ಗೆ ಬೇರೆ ಬೇರೆ ಊಟ ಕೊಡಲಾಗುತ್ತದೆ| ಈ ರೀತಿ ಏಕೆ ಮಾಡಲಾಗುತ್ತದೆ? ಇದರ ಹಿಂದೆ ಇದೆ ರೋಚಕ ಕಹಾನಿ!!!

ವಿಮಾನವನ್ನು ಹಾರಿಸಲು ಇಬ್ಬರು ಪೈಲಟ್ ಗಳಿರುತ್ತಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ಇಬ್ಬರು ಪೈಲಟ್ ಗಳನ್ನು ವಿಮಾನದಲ್ಲಿ ಇರಿಸಲು ಪ್ರಯಾಣಿಕರ ಸುರಕ್ಷತೆಯೇ ಕಾರಣ ಎಂದು ನಿಮಗೆಲ್ಲರಿಗೂ ಗೊತ್ತು.

ಆದರೆ ವಿಮಾನದ ಇಬ್ಬರು ಪೈಲಟ್ ಗಳಿಗೆ ಯಾವಾಗಲೂ ಪ್ರತ್ಯೇಕ ಮತ್ತು ಬೇರೆ ಬೇರೆ ಆಹಾರವನ್ನು ನೀಡಲಾಗುತ್ತದೆ. ಈ ಬಗ್ಗೆ ನಿಮಗೆ ಗೊತ್ತಿದೆಯೇ ? ಬಹುತೇಕರಿಗೆ ತಿಳಿದಿಲ್ಲ ಇದರ ಬಗ್ಗೆ.. ತಿಳಿಯೋಣ ಬನ್ನಿ.

ಇಬ್ಬರು ಪೈಲೆಟ್ ನವರಿಗೆ ಒಂದೇ ರೀತಿಯ ಆಹಾರವನ್ನು ನೀಡಲಾಗುವುದಿಲ್ಲ. ಇದರ ಹಿಂದಿದೆ ಒಂದು ರೋಚಕ ಕಾರಣ.

1984 ರಲ್ಲಿ ಕಾಂಕಾರ್ಡ್ ಸೂಪರ್ಸಾನಿಕ್ ವಿಮಾನವು ಲಂಡನ್ ನಿಂದ ನ್ಯೂಯಾರ್ಕ್‌ ಗೆ ಹೋಗುತ್ತಿತ್ತು. ಈ ವಿಮಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಈ ವಿಮಾನ ಒಟ್ಟು 120 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಒಂದೇ ರೀತಿಯ ಆಹಾರವನ್ನು ನೀಡಲಾಗಿತ್ತು. ಆ ಆಹಾರದಲ್ಲಿ ಏನೋ ದೋಷವಿತ್ತು. ಏಕೆಂದರೆ ಎಲ್ಲಾ ಜನರು ಫುಡ್ ಪಾಯಿಸನಿಂಗ್ ಗೆ ಗುರಿಯಾಗಿದ್ದರು. ಇದಾದ ನಂತರ ಜನರಿಗೆಲ್ಲ‌ ವಾಂತಿ, ಜ್ವರ, ಭೇದಿ ಕಾಣಿಸಿಕೊಂಡಿದೆ. ಫುಡ್ ಪಾಯ್ಸನಿಂಗ್ ನಿಂದಾಗಿ ಓರ್ವ ಪ್ರಯಾಣಿಕ ಕೂಡಾ ಅದರಲ್ಲಿ ಸಾವನ್ನಪ್ಪಿದ್ದ.

ಆ ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳೂ ಕೂಡಾ ಇದೇ ಕಾರಣದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇಂತಹ ಘಟನೆಗಳು ಪುನರಾವರ್ತಿತಗೊಳ್ಳದಂತೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಒಂದೇ ವಿಮಾನದ ಪೈಲಟ್ ಮತ್ತು ಸಹ ಪೈಲಟ್ ಗೆ ಒಂದೇ ಆಹಾರವನ್ನು ನೀಡಲಾಗುವುದಿಲ್ಲ. ಆಹಾರದಲ್ಲಿ ವಿಷವಾಗಿವ ಸಂಭವವಿದ್ದರೂ ಇಬ್ಬರಲ್ಲಿ ಕನಿಷ್ಠ ಒಬ್ಬ ಪೈಲಟ್ ಸುರಕ್ಷಿತವಾಗಿರಬೇಕು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬಹುದು ಎಂಬುದು ಇದರ ಲಾಜಿಕ್.

ಪೈಲೆಟ್ ಗೆ ಪ್ರಥಮ ದರ್ಜೆ ಆಹಾರವನ್ನು ನೀಡಲಾಗುತ್ತದೆ. ಮತ್ತು ಸಹ ಪೈಲೆಟ್ ಗೆ ವ್ಯಾಪಾರ ದರ್ಜೆಯ ಆಹಾರವನ್ನು ನೀಡಲಾಗುತ್ತದೆ. ಅನೇಕ ವಿಮಾನಯಾನ ಸಂಸ್ಥೆಗಳು ಕಾಕ್ ಪಿಟ್ ಸಿಬ್ಬಂದಿಗೆ ಪ್ರತ್ಯೇಕ ಊಟವನ್ನು ಸಹ ತಯಾರಿಸುತ್ತದೆ. ವಿಮಾನಯಾನ ಸಂಸ್ಥೆಗಳು ತಮ್ಮ ಆಹಾರ ಪೈಲೆಟ್ ಮತ್ತು ಸಹ ಪೈಲೆಟ್ ಗೆ ಪ್ರತ್ಯೇಕವಾಗಿ ನೀಡುತ್ತದೆ. ಈ ಆಹಾರ ಪ್ರಯಾಣಿಕರ ಆಹಾರಕ್ಕಿಂತ ವಿಭಿನ್ನವಾಗಿರುತ್ತದೆ.

Leave A Reply

Your email address will not be published.